ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಜೊತೆಗಿನ ವಿವಾದದ ಬಗ್ಗೆ ನಟಿ ಅನಸೂಯ ಮತ್ತೊಮ್ಮೆ ರಿಯಾಕ್ಷನ್ ನೀಡಿದ್ದಾರೆ.
ವಿಜಯ್ ಟೀಂನ ಓರ್ವ ವ್ಯಕ್ತಿ ಹಲವು ನೆಟ್ಟಿಗರಿಗೆ ಹಣ ಕೊಟ್ಟು ತನ್ನ ಮೇಲೆ ಟ್ರೋಲ್ಸ್ ಸೃಷ್ಟಿ ಮಾಡುತ್ತಿರುವ ವಿಚಾರ ತಿಳಿದು ತುಂಬಾ ನೊಂದುಕೊಂಡೆ.. ಒಬ್ಬ ಮಹಿಳೆಯನ್ನು ಹೀಗೆಲ್ಲಾ ಅಪಮಾನಿಸುತ್ತಿದ್ದಾರೆ ಎಂದು ಸಿಟ್ಟು ಬಂತು
ಎಂದು ತಿಳಿಸಿದ್ದಾರೆ.
ಸಮಯ ಸಿಕ್ಕಾಗಲೆಲ್ಲಾ ಈ ವಿಚಾರ ಬಗ್ಗೆ ವಿಜಯ್ ಜೊತೆ ಮಾತನಾಡಲು ಪ್ರಯತ್ನಿಸಿದೆ. ಆದರೆ, ಪಿಆರ್‌ಗಳ ಕಾರಣ ಅದು ಸಾಧ್ಯವಾಗಲಿಲ್ಲ.. ನನಗೆ ಪಿಆರ್‌ಗಳು ಇಲ್ಲ.. ನನಗೆ ನಾನೇ ಪಿಆರ್.. ನನಗೆ ಆತ್ಮಗೌರವ ಇದೆ..