ಗುಜರಾತ್ ಮೂಲದ ಅಮೂಲ್ ಸಂಸ್ಥೆಯ
ಮೇಲೆ ಎಣೆಯಿಲ್ಲದ ಪ್ರೇಮ ಉಕ್ಕಿ ಬರತೊಡಗಿದೆ. ಅಮೂಲ್ ಉತ್ಪನ್ನಗಳಿಗೆ ಕರ್ನಾಟಕದಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದ್ದ ಬಿಜೆಪಿ ಸರ್ಕಾರದ ನಿಲುವಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ಕೆಎಂಎಫ್ ಸಂಸ್ಥೆಯ ಅಳಿವಿಗೆ ದಾರಿಯಾಗುತ್ತದೆ. ನಂದಿನಿ ಬ್ರಾಂಡ್ ಆಪೋಷನ ತೆಗೆದುಕೊಳ್ಳಲು ಅಮೂಲ್ ಮೂಲಕ ಬಿಜೆಪಿ ಷಡ್ಯಂತ್ರ್ಯ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಅಮೂಲ್ ಉತ್ಪನ್ನಗಳ ಬಾಯ್ಕಾಟ್ ಗೆ ಕರೆ ನೀಡಲಾಗಿತ್ತು. ಇದರ ನಂತರ ಬಿಜೆಪಿ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದೆ. ಇದರ ಭಾಗವಾಗಿಯೇ ಪ್ರತಿ ಬಿಪಿಎಲ್ ಕುಟುಂಬಕ್ಕೆ ನಿತ್ಯ ಅರ್ಧ ಲೀಟರ್ ನಂದಿನಿ ಹಾಲನ್ನು ಉಚಿತವಾಗಿ ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಇದೇ ಸಂದರ್ಭದಲ್ಲಿ ನೆರೆಯ ಆಂಧ್ರ ಪ್ರದೇಶದಿಂದ ಕಹಿ ಸುದ್ದಿಯೊಂದು ಬಂದಿದೆ. ಅಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಪ್ರತಿ ತಿಂಗಳು 90 ಲಕ್ಷ ಲೀಟರ್ ನಂದಿನಿ ಹಾಲನ್ನು ಕೆಎಂಎಫ್ ಪೂರೈಸುತ್ತಿತ್ತು. ಕಳೆದ ತಿಂಗಳು 20 ಲಕ್ಷ ಲೀಟರ್ ಕಡಿಮೆ ಪೂರೈಕೆ ಮಾಡಿದ ನೆಪ ಹೇಳಿರುವ ಆಂಧ್ರ ಸರ್ಕಾರ ಅಮೂಲ್ ಹಾಲನ್ನು ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ. ಅದು ಕೂಡ ದುಬಾರಿ ವೆಚ್ಚದಲ್ಲಿ.
ಸದ್ಯ ನಂದಿನಿ ಡೈರಿ ಸಾರಿಗೆ ವೆಚ್ಚ ಸೇರಿ ಪ್ರತಿ ಲೀಟರ್ ಹಾಲಿಗೆ 57.25 ರೂಪಾಯಿ ನಿಗದಿ ಮಾಡಿದೆ. ಅದರಂತೆಯೇ ಆಂಧ್ರ ಸರ್ಕಾರ ನಂದಿನಿ ಹಾಲನ್ನು ಖರೀದಿ ಮಾಡುತ್ತಿತ್ತು. ಇಷ್ಟು ಕಡಿಮೆ ದರದಲ್ಲಿ ನಂದಿನಿ ಹಾಲು ಪೂರೈಕೆ ಆಗುತ್ತಿದ್ದರೂ, ಜಗನ್ ಸರ್ಕಾರ ಮಾತ್ರ ಕುಂಟು ನೆಪ ದುಬಾರಿ ವೆಚ್ಚದಲ್ಲಿ ಅಮೂಲ್ ಹಾಲು ಖರೀದಿಸುತ್ತಿದೆ.
ಅಮೂಲ್ ಸಂಸ್ಥೆ ಸಾರಿಗೆ ವೆಚ್ಚ ಹೊರತುಪಡಿಸಿ ಪ್ರತಿ ಲೀಟರ್ ಹಾಲಿಗೆ 58.50 ರೂಪಾಯಿ ನಿಗದಿ ಮಾಡಿದೆ. ಇದಕ್ಕೆ ಜಗನ್ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ವಿಶೇಷ ಅಂದರೇ, ಅಮೂಲ್ ಕಂಪನಿಯಿಂದ ಎಷ್ಟು ಹಾಲನ್ನು ಖರೀದಿ ಮಾಡುತ್ತಿದ್ದೇವೆ.. ಸಾರಿಗೆ ವೆಚ್ಚಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂಬ ಅಂಶವನ್ನು ಜಗನ್ ಸರ್ಕಾರ ಎಲ್ಲಿಯೂ ಹೇಳುತ್ತಿಲ್ಲ ಎಂದು ಈನಾಡು ಪತ್ರಿಕೆ ವರದಿ ಮಾಡಿದೆ.
ಇದು ಕರ್ನಾಟಕದ ಆಸ್ಮಿತೆಯಾಗಿರುವ ನಂದಿನಿ ಬ್ರ್ಯಾಂಡ್ ವ್ಯಾಪ್ತಿಯನ್ನು ಕುಗ್ಗಿಸುವ ಪ್ರಯತ್ನ.. ಗುಜರಾತಿ ಲಾಬಿಗೆ ಜಗನ್ ಸರ್ಕಾರ ಮಣಿದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.