ಕುಣಿಗಲ್ : 2022-23ರ ಸಾಲಿನ ಅಮೃತ್ತೂರು ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಯಶಸ್ವಿಯಾಗಿ ಮುಕ್ತಾಯವಾಗಿದೆ.

ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಹೂಳಲುಗುಂದ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದೆ.

400 ಮೀಟರ್ ಓಟದ ಸ್ಪರ್ಧೆಯಲ್ಲಿ ಹೂಳಲುಗುಂದ ಪ್ರೌಢಶಾಲೆಯ ಮಿಥುನ್ ಗೌಡ, 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಇದೇ ಶಾಲೆಯ ಹರ್ಷಿತ್ ಗೌಡ ವಿಜೇತರಾಗಿದ್ದಾರೆ. ಇವರು ಕೂಡ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಹೂಳಲುಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಂ ಜಿ ರಘು, ದೈಹಿಕ ಶಿಕ್ಷಣ ಶಿಕ್ಷಕರಾದ ಡಿಸಿ ಹೇಮರಾಜ, ಸಹ ಶಿಕ್ಷಕರಾದ ಶಿವನಂಜಪ್ಪ, ಗೋಪಾಲ್, ಲೀಲಾವತಿ, ಉಷಾರಾಣಿ, ಸೌಮ್ಯ, SDA ಬಸವರಾಜು ಮತ್ತು ಇತರರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಅಮೃತ್ತೂರು ಹೋಬಳಿ ಮಟ್ಟದ ಈ ಕ್ರೀಡಾಕೂಟವನ್ನು ಹೊಳಲಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಸಹ ಶಿಕ್ಷಕರು ಅಚ್ಚುಕಟ್ಟಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಮಾಜಸೇವಕ ಸಂಕೇನಹಳ್ಳಿಯ ಎಸ್ ಎಂ ರಾಜು ಕ್ರೀಡಾಕೂಟದ ಯಶಸ್ಸಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಎಸ್ ಎಂ ರಾಜು ಅವರು ಊಟೋಪಚಾರ ವ್ಯವಸ್ಥೆ ಮಾಡಿದ್ದರು. ಟಿ ಶರ್ಟ್, ಬಹುಮಾನಗಳನ್ನು ನೀಡಿದ್ದರು.
