Layoffs: 10 ಸಾವಿರ ನೌಕರಿಗೆ ಕತ್ತರಿ

ಚೀನಾದ (China) ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಅಲಿಬಾಬಾ ಗ್ರೂಪ್​ ಹೋಲ್ಡಿಂಗ್​ ಪ್ರೈವೇಟ್​ ಲಿಮಿಟೆಡ್ (Alibaba)​​ ಮೂರು ತಿಂಗಳಲ್ಲಿ 10 ಸಾವಿರದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ಆಲಿಬಾಬಾ ಕಂಪನಿಯ ಆದಾಯ ಶೇಕಡಾ 50ರಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ನೌಕರಿಗೆ ಕತ್ತರಿ (Job Cut) ಹಾಕಲಾಗಿದೆ.
ಜೂನ್​ 30ಕ್ಕೆ ಅಂತ್ಯವಾಗುವ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅಲಿಬಾಬಾ ಕಂಪನಿ 9,246 ಮಂದಿಯನ್ನು ನೌಕರಿಯಿಂದ ತೆಗೆದುಹಾಕಿದೆ (Layoffs).
ಸದ್ಯಕ್ಕೆ ಅಲಿಬಾಬಾ ಕಂಪನಿಯಲ್ಲಿ 2,45,700 ಮಂದಿ ಉದ್ಯೋಗಿಗಳಿದ್ದಾರೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದ್ದಲ್ಲಿ ಅಲಿಬಾಬಾ ಕಂಪನಿಯ ಆದಾಯ ಅರ್ಧದಷ್ಟು ಅಂದರೆ 3.4 ಬಿಲಿಯನ್​ ಅಮೆರಿಕನ್​ ಡಾಲರ್​ಗೆ (Dollar) ಕುಸಿದಿದೆ. ಕಳೆದ ಬಾರಿ ಜೂನ್​ ವೇಳೆಗೆ 45.14 ಶತಕೋಟಿ ಯ್ಯುಹಾನ್ (Yuan)​ ಆದಾಯವಿತ್ತು.

LEAVE A REPLY

Please enter your comment!
Please enter your name here