ಮಸ್ಕತ್​ನಲ್ಲಿ ಏರ್ ಇಂಡಿಯಾ ವಿಮಾನಕ್ಕೆ ಬೆಂಕಿ : ಸ್ವಲ್ಪದರಲ್ಲೇ ಪ್ರಯಾಣಿಕರು ಪಾರು

Air India Plain Catches Fire

ಒಮಾನ್ ದೇಶದ ಮಸ್ಕತ್​ನಿಂದ ಕೇರಳದ ಕೊಚ್ಚಿಗೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನದ ಇಂಜಿನ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು (Air India Plain Catches Fire), ಪ್ರಯಾಣಿಕರು ಸಂಭವಿಸಬಹುದಾಗಿದ್ದ ದುರಂತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಮಸ್ಕತ್​ ನಗರದ ವಿಮಾನ ನಿಲ್ದಾಣದಲ್ಲಿ 145 ಜನ  ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ಏಕ್ಸ್​ಪ್ರೆಸ್ ವಿಮಾನ ಹೊರಡಲು ಸಿದ್ಧವಾಗಿ ನಿಂತಿತ್ತು. ಇನ್ನೇನೆ ವಿಮಾನ್ ಟೇಕ್​ ಆಫ್ ಆಗಬೇಕು ಎನ್ನುವ ಸ್ವಲ್ಪ ಸಮಯದಲ್ಲಿಯೇ ವಿಮಾನದ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ (Air India Plain Catches Fire).

ತಕ್ಷಣಕ್ಕೆ ಎಚ್ಚೆತ್ತ ವಿಮಾನ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ 4 ಜನ ಶಿಶುಗಳನ್ನು ಸೇರಿದಂತೆ 145 ಜನ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ತಕ್ಷಣವೇ ವಿಮಾನವನ್ನು ಟರ್ಮಿನಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ : ಮಹಾರಾಷ್ಟ್ರ : ತರಬೇತಿ ವಿಮಾನ ಪತನ – ಪೈಲಟ್​ಗೆ ಗಾಯ

ಆರಂಭದಲ್ಲಿ ಸರ್ಕಾರಿ ಒಡೆತನದಲ್ಲಿದ್ದ ಏರ್ ಇಂಡಿಯಾ ಎಕ್ಸ್​​ಪ್ರೆಸ್​​ನ್ನು ಟಾಟಾ ಗ್ರೂಪ್ ಖರೀದಿಸಿದೆ. ಇದು ಭಾರತದ ಮೊದಲ ಅಂತರಾಷ್ಟ್ರೀಯ ಬಜೆಟ್ ಕ್ಯಾರಿಯರ್ (ಅನುಕೂಲಿತ ವಿಮಾನ ದರ) ಸೇವೆ ನೀಡಿದ ಸಂಸ್ಥೆಯಾಗಿದೆ. ಆದ್ದರಿಂದಾಗೆಯೇ, ಆಗ್ನೇಯ, ಪಶ್ಚಿಮ ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳ ಪ್ರಯಾಣಿಕರೊಂದಿಗೆ ನಿಖಟತೆ ಹೊಂದಿದೆ.

2 ತಿಂಗಳ ಹಿಂದೆ ಕಲ್ಕತ್ತಾದಿಂದ ದುಬೈಗೆ ಹೊರಟ್ಟಿದ್ದ ಏರ್​ಲೈನ್ಸ್​ ವಿಮಾನ ಸುಟ್ಟ ವಾಸನೆಯಿಂದಾಗಿ ಮಸ್ಕತ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು.

ಜುಲೈ ತಿಂಗಳಲ್ಲಿ ಭಾರತದ ವಿಮಾನಯಾನ ಸಂಸ್ಥೆಗಳು ಇದೇ ರೀತಿ ಹಲವು ಸಮಸ್ಯೆಗಳನ್ನು ಎದುರಿಸಿವೆ. ಇದನ್ನೂ ಓದಿ : ತಾಂತ್ರಿಕ ದೋಷ : ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಭಾರತೀಯ ವಿಮಾನ

LEAVE A REPLY

Please enter your comment!
Please enter your name here