ಆಗುಂಬೆ ಘಾಟ್ನಲ್ಲಿ ಲಘು ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಇವತ್ತಿನಿಂದ ಆಗುಂಬೆ ಘಾಟ್ನಲ್ಲಿ ಲಘು ವಾಹನಗಳು ಸಂಚರಿಸಬಹುದಾಗಿದೆ.
ಭೂಕುಸಿತದ ಬಳಿಕ ಘಾಟ್ನಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆಗುಂಬೆಯ 11ನೇ ತಿರುವಿನಲ್ಲಿ ಗುಡ್ಡ ಕುಸಿತವಾಗಿತ್ತು.
ಆದರೆ ಜುಲೈ 30ರವರೆಗೆ ಬಸ್, ಲಾರಿ, ಟ್ರಕ್ ಸೇರಿದಂತೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಿಂದ ಬರುವ ವಾಹನಗಳು ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಮತ್ತು ಕಾರ್ಕಳ ಮೂಲಕ ಮಂಗಳೂರಿಗೆ ತೆರಳಬಹುದಾಗಿದೆ.
ಅಲ್ಲದೇ ತೀರ್ಥಹಳ್ಳಿ,ಮಾಸ್ತಿಕಟ್ಟೆ, ಕುಂದಾಪುರ ರಸ್ತೆ ಮೂಲಕವೂ ಪ್ರಯಾಣಿಸಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದ್ದಾರೆ.