ಬಾಲಯ್ಯ ನಟನೆಯ ‘ಅಖಂಡ’ ಚಿತ್ರ ನೋಡಲು ಥಿಯೇಟರ್​ಗೆ ಬಂದ ‘ಅಘೋರಿಗಳು’

ವಿಶಾಖಪಟ್ಟಣ : ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಚಿತ್ರ ನೋಡಲು ಸ್ವತಃ ಅಘೋರಿಗಳೆ ಚಿತ್ರಮಂದಿರಕ್ಕೆ ಆಗಮಿಸಿರುವ ಅಚ್ಚರಿಯ ಘಟನೆ ನಡೆದಿದೆ.

ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ಚಿತ್ರ ದಿನೇ ದಿನೇ ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸವನ್ನು ಬರೆಯುತ್ತಿದೆ. ಜನ ಮುಗಿದು ಬಿದ್ದು ಅಖಂಡ ನನ್ನ ನೋಡುತ್ತಿದ್ದು, ಕೇವಲ ಮೂರೇ ದಿನದಲ್ಲಿ 50 ಕೋಟಿ ಹಣ ಗಳಿಸಿರುವ ‘ಅಖಂಡ’ ಮತ್ತಷ್ಟು ದಾಖಲೆಗಳನ್ನು ಬರೆಯಲು ಸಜ್ಜಾಗುತ್ತಿದೆ.

ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರು ಇದೇ ಮೊದಲ ಬಾರಿಗೆ ಅಘೋರಿಗಳ ಪಾತ್ರದಲ್ಲಿ ನಟಿಸಿದ್ದಾರೆ. ಅಘೋರಿ ಪಾತ್ರವನ್ನು ಬಾಲಕೃಷ್ಣ ಅವರು ಅಧ್ಬುತವಾಘಿ ನಿರ್ವಹಣೆ ಮಾಡಿದ್ದು, ಅವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿಯನ್ನು ನೀಡಿದೆ.ಬಾಲಕೃಷ್ಣ ಅವರು ಅಘೋರಿ ಪಾತ್ರ ನಿರ್ವಹಿಸಿ ಸನಾತನ ಧರ್ಮದ ರಕ್ಷಣೆಗೆ ಬಗ್ಗೆ ಚಿತ್ರದಲ್ಲಿ ಹೇಳಿದ್ದಾರೆ. ಈ ಬಗ್ಗೆ ಸಮಾಜಿಕ ಜಾಲತಾಣಿಗರು ಬಹು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.

ಇನ್ನು ವಿಶಾಖಪಟ್ಟಣ ಜಿಲ್ಲೆ ನರಸೀಪಟ್ಟಣದ ಬಂಗಾರರಾಜು ಥಿಯೇಟರ್‌ಗೆ ಅಘೋರಿಗಳು ಬಂದು ಚಿತ್ರ ನೋಡಿದ್ದಾರೆ. ಬಹುತೇಕ ಅಘೋರಿಗಳು ಜನರ ಮಧ್ಯೆ ಕಾಣಿಸಿಕೊಳ್ಳುವುದಿಲ್ಲ. ಅವರ ಪ್ರಪಂಚದಲ್ಲಿಯೇ ಅವರು ಜೀವಿಸುತ್ತಾರೆ. ಈ ಹಿಂದೆ ಅಘೋರಿಗಳು ಸಾಮೂಹಿಕವಾಗಿ ಬಂದು ಚಿತ್ರ ನೋಡಿದ್ದರ ಬಗ್ಗೆ ಯಾವುದೇ ದಾಖಲೆಗಳು ಇದೆ. ಇದೇ ಮೊದಲ ಬಾರಿಗೆ ಅಘೋರಿಗಳು ಚಿತ್ರ ನೋಡಲು ಬಂದಿದ್ದರಿಂದ, ಅಘೋರಿಗಳನ್ನು ನೋಡಲು ಸಾಕಷ್ಟು ಜನ ಬಂಗಾರರಾಜು ಚಿತ್ರಮಂದಿರದ ಮುಂದೆ ನೆರೆದಿದ್ದರು.

‘ಈ ಸಿನಿಮಾಗಾಗಿಯೇ ಥಿಯೇಟರ್ ಗೆ ಬಂದಿದ್ದೇವೆ ಅಂತ ತಿಳಿಸಿದ ಅಘೋರರು ನಂತರ ಬಾಲಯ್ಯ ಅಭಿಮಾನಿಗಳೊಂದಿಗೆ ಶಿವನಾಮಸ್ಮರಣೆ ಮಾಡಿದರು. ನಟ ಬಾಲಯ್ಯ ಅವರಿಗೆ ನಮ್ಮ ಆಶೀರ್ವಾದವಿದೆ ಎಂದು ಅಘೋರಿಗಳು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here