BREAKING: 1070 ದಿನ, 2 ವರ್ಷಗಳ ಬಳಿಕ ಉತ್ತರಪ್ರದೇಶದಲ್ಲಿ ಬಂಧಿತ ಪತ್ರಕರ್ತನಿಗೆ ಜಾಮೀನು

Siddque Kappan
Siddque Kappan
1070 ದಿನಗಳ ಬಳಿಕ ಕೇರಳದ ಪತ್ರಕರ್ತ ಸಿದ್ದಿಕ್​ ಕಪ್ಪನ್ (Siddique Kappan) ​ಗೆ ಸರ್ವೋಚ್ಛ ನ್ಯಾಯಾಲಯ (Supreme Court) ಜಾಮೀನು ಮಂಜೂರು (Grants Bail) ಮಾಡಿದೆ.
ಉತ್ತರಪ್ರದೇಶ (Uttarpradesh) ರಾಜ್ಯದ ಹತ್ರಾಸ್ (Hathras)​ನಲ್ಲಿ ಎಸಗಲಾಗಿದ್ದ ದಲಿತ (Dalit) ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಸಂಬಂಧ ತನಿಖಾ ವರದಿಗಾರಿಕೆಗೆ ತೆರಳಿದ್ದ ಸಿದ್ದಿಕ್​ ಕಪ್ಪನ್​ ಅವರನ್ನು ಉತ್ತರಪ್ರದೇಶ ಪೊಲೀಸರು (UP Police) ಬಂಧಿಸಿದ್ದರು.
ಅಕ್ಟೋಬರ್​ 6, 2020ರಲ್ಲಿ ಬಂಧನದ ಬಳಿಕ ಕಪ್ಪನ್​ ಮೇಲೆ ಉಗ್ರವಾದ ನಿರ್ಬಂಧಿಸುವ ಯುಎಪಿಎ (UAPA) ಕಾಯ್ದೆ ಮತ್ತು ಇತರೆ ಐಪಿಸಿ ಕಲಂಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಕಪ್ಪನ್​ಗೆ ಅಲಹಬಾದ್​ ಹೈಕೋರ್ಟ್ (Allahabad High Court)​ ಜಾಮೀನು ನೀಡಿರಲಿಲ್ಲ. ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಕಪ್ಪನ್​ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದರು.
ಜಾಮೀನು ಪಡೆದಿರುವ ಕಪ್ಪನ್​ಗೆ ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಯು ಯು ಲಲಿತ್​ ಮತ್ತು ಎಸ್​ ರವೀಂದ್ರ ಭಟ್​ ಅವರ ಪೀಠ ಕೆಲವು ಷರತ್ತುಗಳನ್ನು (Bail Conditions) ವಿಧಿಸಿದೆ.
1. ಜೈಲಿನಿಂದ ಬಿಡುಗಡೆ ಆದ ಬಳಿಕ 6 ವಾರಗಳವರೆಗೆ ದೆಹಲಿಯ ಜಂಗಪುರದಲ್ಲೇ ಇರಬೇಕು.
2. 6 ವಾರಗಳ ಬಳಿಕ ತವರು ಕೇರಳಕ್ಕೆ ಹೋಗಲು ಅನುಮತಿ
3. ವಿಚಾರಣಾ ನ್ಯಾಯಾಲಯದ (Trial Court) ಅನುಮತಿ ಇಲ್ಲದೇ ದೆಹಲಿ (Delhi) ಬಿಟ್ಟು ತೆರಳುವಂತಿಲ್ಲ.
4. ಜೈಲಿನಿಂದ ಬಿಡುಗಡೆ ಆದ ಮೊದಲ 6 ವಾರ ಪ್ರತಿ ಸೋಮವಾರ ಪೊಲೀಸ್​ ಠಾಣೆಗೆ (Police Station) ಖುದ್ದಾಗಿ ಹಾಜರಾಗಬೇಕು.
6. ಕೇರಳ (Kerala)ಕ್ಕೆ ಹೋದ ಬಳಿಕವೂ ಪ್ರತಿ ಸೋಮವಾರ ಠಾಣೆಗೆ ಹಾಜರಾಗಬೇಕು.
7. ಪಾಸ್​ಪೋರ್ಟ್​ನ್ನು (Passport) ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು

LEAVE A REPLY

Please enter your comment!
Please enter your name here