ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಈ ಭೂಕಂಪದಲ್ಲಿ 1 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ 6.1 ತೀವ್ರತೆಯ ಭೂಕಂಪದ ಸಂಭವಿಸಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಆಗ್ನೇಯದಲ್ಲಿದೆ.
ಈ ದುರ್ಘಟನೆಯಲ್ಲಿ 1 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೊಹಮ್ಮದ್ ನಾಸಿಮ್ ಹಕ್ಕಾನಿ ಹೇಳಿದ್ದಾರೆ.
ರಾತ್ರೋ ರಾತ್ರಿ ನಡೆದ ಈ ಭೂಕಂಪದಲ್ಲಿ ಸಾವಿರಾರು ಜನ ಸಾವನ್ನಪ್ಪಿದ್ದರೆ, ಇನ್ನಷ್ಟು ಜನ ಕುಟುಂವ ಕಳೆದುಕೊಂಡಿದ್ದಾರೆ. ಆಸ್ತಿ-ಪಾಸ್ತಿಗಳು ಈ ಭೂಕಂಪದಿಂದ ನಾಶವಾಗಿವೆ.
ಇತ್ತೀಷೆಗಷ್ಟೇ ಆಡಳಿತಕ್ಕೆ ಬಂದಿರುವ ತಾಲಿಬಾನ್ ಸರ್ಕಾರಕ್ಕೆ ಮೊದಲ ಸವಾಲು ಎದುರಾಗಿದೆ.