ಮಹತ್ವದ ಬೆಳವಣಿಗೆಯೊಂದರಲ್ಲಿ ಆಧಾರ್ ಕಾರ್ಡ್ನ ಜೆರಾಕ್ಸ್ ಅಥವಾ ಫೋಟೋ ಕಾಪಿಯನ್ನು ಯಾವ ಸಂಸ್ಥೆಯೊAದಿಗೂ ಹಂಚಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ಎಚ್ಚರಿಕೆಯ ಸಲಹೆ ನೀಡಿದೆ.
ಎಚ್ಚರಿಕೆ ಸಂದೇಶ ನೀಡಿದ ಕೆಲವೇ ನಿಮಿಷಗಳಲ್ಲಿ ತನ್ನ ಎಚ್ಚರಿಕೆಯನ್ನು ವಾಪಾಸು ಪಡೆದಿದ್ದು, ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗುತತ್ಇದೆ ಎಂದು ತನ್ನ ಹೇಳಿಕೆಯಲ್ಲಿ ಹೇಳಿದೆ.
ಈ ಮೂಲಕ ಕೇಂದ್ರ ಸರ್ಕಾರ ಎಲ್ಲದ್ದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ವೇಳೆ `ಆಧಾರ್ ಕಾರ್ಡ್ನ ದುರ್ಬಳಕೆ ಆಗಲಿದೆ’ ಎಂದು ತಜ್ಞರು ವ್ಯಕ್ತಪಡಿಸಿದ್ದ ಆತಂಕ ನಿಜವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಳಂಬವಾಗಿಯಾಗಿಯಾದರೂ ಈಗಾಲಾದರೂ ಎಚ್ಚೆತ್ತುಕೊಂಡಿದೆ.
`ಯಾವುದೇ ಸಂಸ್ಥೆಗಳ ಜೊತೆಗೆ ಆಧಾರ್ ಕಾರ್ಡ್ ಪ್ರತಿಯನ್ನು ಹಂಚಿಕೊಳ್ಳಬೇಡಿ, ಆಧಾರ್ಕಾರ್ಡ್ ದುರ್ಬಳಕೆ ಆಗುವ ಸಾಧ್ಯತೆ ಇದೆ. ಅದರ ಬದಲು ಆಧಾರ್ ಕಾರ್ಡ್ನ ಮೊದಲ ಅಂಕಿಗಳನ್ನು ಮಾಸ್ಕ್ ಮಾಡಿ (ಬ್ಲರ್ ಮಾಡಿ) ಕೊನೆಯ ನಾಲ್ಕು ಅಂಕಿಗಳನ್ನು ಮಾತ್ರ ಬಳಸಿ’ ಎಂದು ಸಲಹೆ ನೀಡಿದೆ.
`ಮಾಸ್ಕ್ ಆಧಾರ್ ಕಾರ್ಡ್ನ್ನು ಯುಐಡಿಎಐ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳುವಂತೆಯೂ, ಡೌನ್ಲೋಡ್ ವೇಳೆ `ನಿಮಗೆ ಮಾಸ್ಕ್ (ಬ್ಲರ್) ಆಗಿರುವ ಆಧಾರ್ ಬೇಕೇ ಎಂಬ ಆಯ್ಕೆಯನ್ನು ಒತ್ತಿ ಡೌನ್ಲೋಡ್ ಮಾಡಿಕೊಳ್ಳುವಂತೆ’ ಸಲಹೆ ನೀಡಿದೆ.
ಆಧಾರ್ ವೆಬ್ಸೈಟ್ಗೆ ಹೋಗಿ ಈಗಿರುವ ಆಧಾರ್ ಸಂಖ್ಯೆಯನ್ನು ದೃಢೀಕರಿಸಿಕೊಳ್ಳುವಂತೆಯೂ ಅಥವಾ ಯುಐಡಿಎಐ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಂಡು ಸ್ಕಾö್ಯನ್ ಮಾಡಿ ದೃಢೀಕರಿಸಿಕೊಳ್ಳುವಂತೆಯೂ’ ಪ್ರಧಾನಿ ಮೋದಿ ಸರ್ಕಾರ ಸಲಹೆ ನೀಡಿದೆ.
ಸಾರ್ವಜನಿಕ ನೆಟ್ಕೆಫೆಗಳು, ಸೈಬರ್ ಸೆಂಟರ್ಗಳಲ್ಲಿ, ಕಿಯೋಸ್ಕ್ಗಳಲ್ಲಿ ಆಧಾರ್ ಡೌನ್ಲೋಡ್ ಮಾಡಿಕೊಳ್ಳದಂತೆ, ಒಂದು ವೇಳೆ ಅನಿವಾರ್ಯವಾದ್ದಲ್ಲಿ ಡೌನ್ಲೋಡ್ ಮಾಡಿದ ಬಳಿಕ ಬಳಸಿದ ಕಂಪ್ಯೂಟರ್ನಿAದ ಆ ಡೌನ್ಲೋಡ್ ಕಾಪಿಯನ್ನು ಪರ್ಮನೆಂಟ್ ಡಿಲೀಟ್ ಮಾಡುವಂತೆಯೂ ಸಲಹೆ ನೀಡಿದೆ.
ಹೋಟೆಲ್ ಮತ್ತು ಸಿನಿಮಾ ಮಾಲ್ಗಳಲ್ಲಿ ಆಧಾರ್ ಕೇಳುವಂತಿಲ್ಲ:
ಆಧಾರ್ ಸಂಸ್ಥೆಯಿAದ ಅನುಮತಿ ಪಡೆದಿರುವ ಸಂಸ್ಥೆಗಳು ಮಾತ್ರ ಆಧಾರ್ ಕೇಳಬಹುದು. ಹೋಟೆಲ್ ಮತ್ತು ಸಿನಿಮಾ ಮಾಲ್ಗಳಲ್ಲಿ ಆಧಾರ್ ಕೇಳುವಂತಿಲ್ಲ, ಇವರಿಗೆ ಅನುಮತಿ ಕೇಳಲು ಅನುಮತಿ ಇಲ್ಲ. ಅನುಮತಿ ಇಲ್ಲದೇ ದೃಢೀಕರಣಕ್ಕಾಗಿ ಆಧಾರ್ ಅಂಕಿಯನ್ನು ಕೇಳುವುದು ಅಪರಾಧವಾಗಿರುತ್ತದೆ. ಆಧಾರ್ ಕೇಳಿದರೆ ಅಂಥವರು ಲೈಸನ್ಸ್ ಹೊಂದಿದ್ದಾರೆಯೇ ಎಂದು ದೃಢೀಕರಿಸಿಕೊಳ್ಳಿ ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.