ನಟಿ ಶ್ರೀಲೀಲಾ ತಾಯಿ ವಿರುದ್ಧ FIR – ಬಂಧನ ಭೀತಿಯಲ್ಲಿ ಪರಾರಿ ಆಗಿರುವ ಮಾಹಿತಿ

ಕನ್ನಡದ ನಟಿ ಶ್ರೀಲೀಲಾ (Sreeleela) ಅವರ ತಾಯಿ ಡಾ. ಸ್ವರ್ಣಲತಾ (Sreeleela mother Dr Swarnalatha) ವಿರುದ್ಧ ಬೆಂಗಳೂರು ಹೊರವಲಯ ಆನೇಕಲ್​ (Anekal)ನ ಪೊಲೀಸರು ಎಫ್​ಐಆರ್ (FIR)​ ದಾಖಲಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಎರಡನೇ ಆರೋಪಿ ಆಗಿರುವ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪರಾರಿ ಆಗಿದ್ದಾರೆ ಎಂದು ವರದಿ ಆಗಿದ್ದು, ಮೊದಲ ಆರೋಪಿ ಮಧುಕರ್​ ಅಂಗೂರ್​ರನ್ನು (Madhukar Anguru) ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ..?
ಖಾಸಗಿ ವಿವಿ ಆಗಿರುವ ಅಲಯನ್ಸ್​ ವಿಶ್ವವಿದ್ಯಾಲಯವನ್ನು (Alliance VV) ಪ್ರಮುಖ ರಾಜಕಾರಣಿಯೊಬ್ಬರಿಗೆ ಮಾರಾಟ ಮಾಡಿಸುವ ಸಂಬಂಧ ಮಧುಕರ್​ ಅಂಗೂರ್​ ಜೊತೆ ಸೇರಿ ಸ್ವರ್ಣಲತಾ ವ್ಯವಹಾರ ಮಾಡಿದ್ದರು.
ಆದರೆ ಮಧುಕರ್​ ಅಂಗೂರ್​ ಅವರನ್ನು ಈ ಹಿಂದೆ ಸೆಷನ್ಸ್​ ಕೋರ್ಟ್​​ ಮತ್ತು ಹೈಕೋರ್ಟ್​​ ನೀಡಿದ್ದ ಆದೇಶಗಳ ಮೇರೆ ವಿವಿಯಿಂದ ಹೊರಹಾಕಲಾಗಿತ್ತು.
ಮಧುಕರ್​ ಅಂಗೂರ್​​ ಅವರನ್ನು ವಿವಿಯಿಂದ ಹೊರಹಾಕಿದ್ದರೂ ಅಂಗೂರ್​ ಜೊತೆಗೆ ಸೇರಿ ಸ್ವರ್ಣಲತಾ ವಿವಿ ಮಾರಾಟಕ್ಕೆ ವ್ಯವಹಾರ ಮಾಡಿದ್ದರು.
ವಿವಿಗೆ ನುಗ್ಗಿ ಬಂದೂಕು ಗಲಾಟೆ ಮಾಡಿದ್ದ ಸ್ವರ್ಣಲತಾ..!
ಸೆಪ್ಟೆಂಬರ್​ 10ರಂದು ಬೆಳಗ್ಗೆ 11 ಗಂಟೆಗೆ ವಿವಿಯ ಆಡಳಿತ ವಿಭಾಗಕ್ಕೆ ನುಗ್ಗಿ ಮಧುಕರ್​ ಅಂಗೂರ್​ ಮತ್ತು ಸ್ವರ್ಣಲತಾ ಬಂದೂಕು ಹಿಡಿದು ಗಲಾಟೆ ಮಾಡಿದ್ದರು. ಗುಂಪು ಕಟ್ಟಿಕೊಂಡು ಬಂದಿದ್ದ ಇಬ್ಬರೂ ವಿವಿಯಲ್ಲಿದ್ದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದರು. ಎಲ್ಲರ ಮೇಲೂ ಬಂದೂಕಿನಿಂದ ಗುಂಡು ಹಾರಿಸುವುದಾಗಿ ಬೆದರಿಸಿದ್ದರು.
ಈ ಗಲಾಟೆ ಹಿನ್ನೆಲೆಯಲ್ಲಿ ವಿವಿಯ ರಿಜಿಸ್ಟ್ರಾರ್​ ಡಾ.ನಿವೇದಿತಾ ಮಿಶ್ರಾ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವೈದ್ಯೆ ಆಗಿರುವ ಶ್ರೀಲೀಲಾ ತಾಯಿ:
ನಟಿ ಶ್ರೀಲೀಲಾ ತಾಯಿ ಡಾ.ಸ್ವರ್ಣಲತಾ ಅವರು ಸ್ತ್ರೀ ರೋಗ ತಜ್ಞೆ.

LEAVE A REPLY

Please enter your comment!
Please enter your name here