ದೇಶದಲ್ಲಿ ಹೆಚ್ಚುತ್ತಿರುವ ಕೋಮು ಹಿಂಸೆ ವಿರೋಧಿಸಿ ನಟಿ ಸಾಯಿ ಪಲ್ಲವಿ ನೀಡಿದ್ದ ಹೇಳಿಕೆಯನ್ನು ಕೆಲವರು ವಿವಾದ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯನ್ನು ಟ್ರೋಲ್ ಮಾಡುವ ಜೊತೆಗೆ ಬೆದರಿಕೆ ಹಾಕುತ್ತಿದ್ದಾರೆ. ಹೈದೆರಾಬಾದ್ ನಲ್ಲಿ ದೂರು ಕೂಡಾ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಟಿ ಸಾಯಿ ಪಲ್ಲವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ವಿಶಾಖಪಟ್ಟಣದಲ್ಲಿ ಮಾತನಾಡಿದ ಅವರು,
‘‘ನಾನು ನನ್ನ ಹೇಳಿಕೆಗೆ ಸ್ಪಷ್ಟನೆ ನೀಡುತ್ತೇನೆ. ಆದರೇ ಈಗಲ್ಲ. ನಾನು ಈಗ ಏನೇ ಮಾತನಾಡಿದರೂ, ಅದು ವಿರಾಟ ಪರ್ವಂ ಫಿಲ್ಮ್ ಪ್ರಮೋಷನ್ ಗಿಮಿಕ್ ಎಂದುಕೊಳ್ಳುತ್ತಾರೆ. ಈ ವಿವಾದದಿಂದ ನನ್ನನ್ನು ಸೇವ್ ಮಾಡಬೇಕು ಎಂದು ನನ್ನ ಅಭಿಮಾನಿಗಳು ಪ್ರಯತ್ನ ಮಾಡುತ್ತಿದ್ದಾರೆ. ಎಂಬುದು ಗೊತ್ತು. ವಿರಾಟ ಪರ್ವಂ ಸಿನೆಮಾ ಬಿಡುಗಡೆಯಾದ ಮೇಲೆ ಈ ವಿವಾದದ ಬಗ್ಗೆ ಮಾತನಾಡುತ್ತೇನೆ ..’’ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಣಾ ದಗ್ಗುಬಾಟಿ ಮಾತನಾಡಿ.. ‘‘ನಾನು ಇಲ್ಲದ ಸಂದರ್ಭದಲ್ಲಿ ಸಾಯಿ ಪಲ್ಲವಿ ಬಳಿ ಮಾತನಾಡಿದ್ದಾರೆ. ನಾನು ಇದ್ದಿದ್ದರೆ ಇದು ಇಲ್ಲಿಯವರೆಗೂ ಬರುತ್ತಿರಲಿಲ್ಲ..’’ ಎಂದಿದ್ದಾರೆ.