ಬಿಜೆಪಿಗೆ ಮಾದಕ ನಟಿ ಸೇರ್ಪಡೆ – ಬದಲಾಗುತ್ತಾ ಬಿಜೆಪಿ ಲಕ್‌..?

ಒಂದು ಕಾಲಕ್ಕೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಕ್ರೇಜಿಸ್ಟಾರ್‌ ರವಿಚಂದ್ರನ್‌ ಜೊತೆ ನಟಿಸಿದ್ದ ಖ್ಯಾತ ನಟಿ ನಮಿತಾ ಮುಖೇಶ್‌ ವಂಕವಾಲಾ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಚೆನ್ನೈನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಸಮ್ಮಖದಲ್ಲಿ ಕಮಲದ ಬಾವುಟ ಹಿಡಿದರು.

ಮೂಲತಃ ಗುಜರಾತ್‌ ರಾಜ್ಯದ ಸೂರತ್‌ ಮೂಲದ ನಮಿತಾ ಬಿಜೆಪಿಗೆ ಸೇರ್ಪಡೆ ಆಗುವ ಮೊದಲು ತಮಿಳುನಾಡು ಆಡಳಿತಾರೂಢ ಪಕ್ಷ ಎಐಎಡಿಎಂಕೆ ಪಕ್ಷದಲ್ಲಿದ್ದರು. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ತಮಿಳು ನಟ-ನಟಿಯರನ್ನು ಸೆಳೆಯುತ್ತಿದೆ.

ದರ್ಶನ್‌ಗೆ ಇಂದ್ರ ಸಿನಿಮಾದಲ್ಲಿ ನಾಯಕಿ ನಟಿಯಾಗಿ ನೀಲಕಂಠ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ನಮಿತಾ ೨೦೦೧-೨೦೦೮ರ ಅವಧಿಯಲ್ಲಿ ತಮಿಳುನಾಡಿನ ಜನಪ್ರಿಯ ನಟಿ ಆಗಿದ್ದರು.  ತನ್ನ ಮಾದಕತೆಯ ಮೂಲಕ ನಿದ್ದೆಗೆಡಿಸಿದ್ದ ನಮಿತಾಗೆ ಕೊಯಮುತ್ತೂರಲ್ಲಿ ದೇವಸ್ಥಾನವನ್ನೊಂದನ್ನು ನಿರ್ಮಿಸಲಾಗಿದೆ. ತೆಲುಗಿನಲ್ಲೂ ಈಕೆ ಹಲವು ಸೂಪರ್‌ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

LEAVE A REPLY

Please enter your comment!
Please enter your name here