ರಾಕಿ ಬಾಯ್ ಯಶ್ ಹುಟ್ಟು ಹಬ್ಬ : ಕೆಜಿಎಫ್-2 ಪೋಸ್ಟರ್ ಬಿಡುಗಡೆ

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ಕೆಜಿಎಫ್ ಚಿತ್ರ ತಂಡ ನೂತನ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ನಲ್ಲಿ ಕೆಜಿಎಫ್ ಚಿತ್ರದಲ್ಲಿನ ಯಶ್ ಡೆಡ್ಲಿ ಲುಕ್ ಅನ್ನು ಪರಿಚಯಿಸಲಾಗಿದೆ.

ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಪ್ರಸಿದ್ಧಿ ತಂದುಕೊಟ್ಟ ನಟ ರಾಕಿಂಗ್ ಸ್ಟಾರ್ ಯಶ್‌ ಅವರ ಕೆಜಿಎಫ್‌ 2 ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದ್ದು, ಯಶ್‌ ಜನ್ಮದಿನವಾದ ಇಂದೇ (ಜ.8) ಪೋಸ್ಟರ್‌ ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಹೊಂಬಾಳೆ ಸಂಸ್ಥೆ ಹಾಗೂ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಹೊಸ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಚ್ಚರ ಮುಂದೆ ಅಪಾಯವಿದೆ ಎಂಬ ನುಡಿ ಪೋಸ್ಚರ್ ನಲ್ಲಿದ್ದು, ಹ್ಯಾಪ್ ಹುಟ್ಟು ಹಬ್ಬ ಮೈ ರಾಕಿ ಬಾಯ್ ಎಂದು ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ.

ಕೊರೋನಾ ಮೂರನೇ ಅಲೆಯ ಭೀತಿ ನಡುವೆಯೇ ಈಗ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಆರ್ ಆರ್ ಆರ್ ಚಿತ್ರ ಸೇರಿದಂತೆ ಸಾಕಷ್ಟು ಬಹು ನಿರೀಕ್ಷಿತ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿವೆ. ಅದಾಗ್ಯೂ ಕೆಜಿಎಫ್‌ 2 ಚಿತ್ರ ಏಪ್ರಿಲ್‌ 14 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

LEAVE A REPLY

Please enter your comment!
Please enter your name here