ನಟ ವಿಜಯ್ರಾಘವೇಂದ್ರ ಅವರ ಪತ್ನಿ ಸ್ಪಂದನಾ ಇನ್ನಿಲ್ಲ. ಹೃದಯಾಘಾತದಿಂದ ಸ್ಪಂದನಾ ಅವರ ನಿಧನರಾಗಿದ್ದಾರೆ.
ತಮ್ಮ ಮತ್ತು ಪತ್ನಿ ಸ್ಪಂದನಾ ಪ್ರೇಮಾರಂಭ ಬಗ್ಗೆ ನಟ ವಿಜಯ್ ರಾಘವೇಂದ್ರ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ಲವ್ಗೆ ಲೈಫ್ ಶುರುವಾಗಿದ್ದು ಮದುವೆ ಆದ್ಮೇಲೆ. ಬಹಳ ಸಂಕೋಚ ನನಗೆ. ಮಾತಾಡಿಸುವುದಕ್ಕೆ ಮೂರು ವರ್ಷ ತಂಗೊಡಿದ್ದೀನಿ. 2004ರಲ್ಲಿ ಒಂದು ಹುಡುಗಿನ ನೋಡ್ತೀನಿ, ಮಲ್ಲೇಶ್ವರಂ ಕಾಫಿಡೇನಲ್ಲಿ. ಮತ್ತೆ 2006ನಲ್ಲಿ ಅದೇ ಹುಡುಗಿನ ನೋಡ್ತೀನಿ ಶೇಷಾದ್ರಿಪುರಂ ಕಾಫಿಡೇನಲ್ಲಿ. ಅದರ ನಂತರದ ಕಥೆ, ಪುಟ, ಲವ್ಲೈಫ್ ಸ್ಪಂದನ. – ವಿಜಯ್ ರಾಘವೇಂದ್ರ
ಫಸ್ಟ್ ನೀವು ನನ್ನ ಕಾಫಿಡೇನಲ್ಲಿ ನೋಡಿದ್ರಿ. ನನಗೆ ಮ್ಯೂಸಿಕ್ ಸ್ವಲ್ಪ ಜೋರಾಗಿ ಬೇಕಾಗಿತ್ತು, ನಿಮಗೆ ಕಡಿಮೆ ಸೌಂಡ್ ಬೇಕಿತ್ತು, ಯಾಕಂದ್ರೆ ನೀವೇನೂ ಡಿಸ್ಕಷನ್ ಮಾಡ್ತಾ ಇದ್ರಿ. ಆಗ ನಮ್ಮ ನಡುವೆ ಕ್ಲ್ಯಾಶ್ ಆಯ್ತು.
ಆದಾದ ಬಳಿಕ ಮೂರು ವರ್ಷ ಆದ್ಮೇಲೆ ಮತ್ತೆ ನೀವು ನನ್ನನ್ನು ಕಾಫಿ ಡೇನಲ್ಲಿ ನೋಡಿದ್ರಿ. ನಾನು ಫ್ರೆಂಡ್ಸ್ ಜೊತೆ ಕೂತಿದ್ದಾಗ ಹಾಯ್ ನಾನು ವಿಜಯ್ ಅಂತ ನನ್ನ ಮಾತಾಡಿಸಿದ್ರಿ. ಆಗ ನನಗೆ ಏನ್ ರೆಸ್ಪಾಂಡು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ. – ಸ್ಪಂದನ
ನನಗೆ ಮಂಗಳೂರು ಹುಡುಗಿ ಬೇಕು ಅಂತ ಆಸೆ ಆಗಿತ್ತು, ನಿನಗಾಗಿ ಶೂಟಿಂಗ್ ವೇಳೆ. ಸ್ಪಂದನ ಅವರ ಊರು ಬೆಳ್ತಂಗಡಿ, ಮಂಗಳೂರಿನವರು. ಆಕೆ ತುಂಬಾ ತುಂಬಾ ತುಂಬಾ ಸ್ಟ್ರಾಂಗ್, ಅಚ್ಚರಿ ಕೊಡುವುದರಲ್ಲಿ ಮಾಸ್ಟರ್. – ವಿಜಯ್ ರಾಘವೇಂದ್ರ
ADVERTISEMENT
ADVERTISEMENT