ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷಿತ ಯುಐ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.
ಈ ಚಿತ್ರದ ಶೂಟಿಂಗ್ಗಾಗಿ ಚಿತ್ರತಂಡ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ದುಬಾರಿ ಸೆಟ್ ಅನ್ನು ನಿರ್ಮಾಣ ಮಾಡಿದೆ. ಕಲಾ ನಿರ್ದೆಶಕ ಶಿವಕುಮಾರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಕಾಂಬಿನೇಷನ್ ನಲ್ಲಿ ಯುಐ ಸ್ಪೆಷಲ್ ಎಪಿಸೋಡ್ ಶೂಟಿಂಗ್ ನಡೆದಿತ್ತು. ಈ ವೇಳೆ ಶಿವರಾಜ್ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ಕುಮಾರ್ ಸರ್ಪ್ರೈಸ್ ಭೇಟಿ ನೀಡಿದ್ದಾರೆ.
ನಟ ಉಪೇಂದ್ರ ಅವರು ಈ ವೇಳೆ ಸಿನೆಮಾದ ತಮ್ಮ ಪಾತ್ರದ ಗೆಟಪ್ನಲ್ಲಿದ್ದರು. ಶಿವಣ್ಣ ಹಾಗೂ ಗೀತಕ್ಕೆ ಸರ್ಪ್ರೈಸ್ ಎಂಟ್ರಿಯಿಂದ ಉಪ್ಪಿ ಖುಷಿ ವ್ಯಕ್ತಪಡಿಸಿದ್ದಾರೆ. ನಟ ಉಪೇಂದ್ರ ತಮ್ಮ ಗೆಟಪ್ನಲ್ಲಿಯೇ ಶಿವಣ್ ಹಾಗೂ ಗೀಆ ಅವರ ಜೊತೆ ಉಭಯ ಕುಶಲೋಪರಿ ಮಾತುಕತೆ ನಡೆಸಿದ್ದಾರೆ.
ಸೆಟ್ಗೆ ಭೇಟಿ ನೀಡಿದ ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್ ಸೆಟ್ ಬಗ್ಗೆ ಹಾಗೂ ಉಪೇಂದ್ರರ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತನಗಳನ್ನಾಡಿದ್ದಾರೆ.
ಇನ್ನು, ಯುಐ ಚಿತ್ರಕ್ಕೆ ನಟ ಉಪೇಂದ್ರ ಅವರೇ ನಾಯಕ ನಟನಾಗಿದ್ದು, ಇವರೇ ನಿರ್ದೇಶನ ಮಾಡುತ್ತಿದ್ದಾರೆ. ಕೆ.ಪಿ.ಶ್ರೀಕಾಂತ್ ಅವರು ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ಭರ್ಜರಿಯಾಗಿ ನಡೆದಿತ್ತು.