ನಟ, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ತಾಯಿ ಸುಜಾತ ವೀರಪ್ಪ ಅಂಬರ್ ಹೃದಯ ಸಂಬಂಧಿ ಕಾಯಿಲೆಯಿಂದ ಶುಕ್ರವಾರ (ಜುಲೈ 15) ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ಸುಜಾತ ಅವರು ವೀರಪ್ಪ ಅಂಬರ್ ಅವರ ಧರ್ಮಪತ್ನಿಯಾಗಿದ್ದು, ಹಾರ್ಟ್ ಪ್ರಾಬ್ಲಮ್ನಿಂದ ಬಳಲುತ್ತಿದ್ದರು. ಇವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ದುರ್ಗಾಪರಮೇಶ್ವರಿ ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತ ಅವರು ಹಲವು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಇನ್ನೂ ಇವರ ಪುತ್ರ ನಟ ಪೃಥ್ವಿ ಅಂಬರ್ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದು, ದಿಯಾ ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ.