ಸಿಡಿದೆದ್ದ ಕಿಚ್ಚ ಸುದೀಪ್.. ಪ್ರೊಡ್ಯೂಸರ್ ವಿರುದ್ಧ ಕಾನೂನು ಸಮರ

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ವಿವಾದ ಶುರುವಾಗಿದೆ. ನಿರ್ಮಾಪಕ ಎನ್ ಕುಮಾರ್ (N Kumar) ವಿರುದ್ಧ ಪ್ಯಾನ್ ಇಂಡಿಯಾದ ಸ್ಟಾರ್ ನಟ ಸುದೀಪ್ (Kiccha Sudeepa) ಕಾನೂನು ಸಮರಕ್ಕೆ ಇಳಿದಿದ್ದಾರೆ.

ಸಿನಿಮಾ ಮಾಡಿಕೊಡುವುದಾಗಿ ನಟ ಸುದೀಪ್ ಅಡ್ವಾನ್ಸ್ ತೆಗೆದುಕೊಂಡಿದ್ದಾರೆ. ಈ ನೋಡಿದರೇ ಕೈಗೆ ಸಿಗುತ್ತಿಲ್ಲ.. ಕಾಲ್​ಶೀಟ್​ (Callsheet) ಕೊಡುತ್ತಿಲ್ಲ ಎಂದು ನಿರ್ಮಾಪಕ ಎನ್ ಕುಮಾರ್ ನಾಲ್ಕು ದಿನಗಳ ಹಿಂದೆ ಆರೋಪ ಮಾಡಿದ್ದರು.

ಈ ರೀತಿಯ ಆರೋಪಗಳಿಂದ ತಮ್ಮ ಮಾನಹಾನಿಯಾಗಿದೆ ಎಂದು ಆರೋಪಿಸುರುವ ನಟ ಕಿಚ್ಚ ಸುದೀಪ್​ 10 ಕೋಟಿ ಪರಿಹಾರ ನೀಡುವಂತೆ ನೊಟೀಸ್ ಜಾರಿ ಕೊಡಿಸಿದ್ದಾರೆ. (Legal Notice) ಅಲ್ಲದೇ ಎನ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ (Criminal Case) ದಾಖಲು ಮಾಡಿದ್ದಾರೆ.

ತಮ್ಮ ವಕೀಲರ ಮೂಲಕ ಎನ್ ಕುಮಾರ್​ ಆರೋಪಕ್ಕೆ ಉತ್ತರ ನೀಡಿದ್ದಾರೆ.

ನೀವು ನನ್ನ ತಾಳ್ಮೆ ಪರೀಕ್ಷಿಸಿದ್ದೀರಿ. ಸುಳ್ಳಿನ ಕಂತೆ ಕಟ್ಟಿ  ನನ್ನ ತೇಜೋವಧೆ ಮಾಡಿದ್ದೀರಿ.. ನೀವು ಮಾಡಿರುವ ಆರೋಪಗಳನ್ನು ಸಾಬೀತು ಪಡಿಸಿ.. ಇಲ್ಲವಾದಲ್ಲಿ 10 ಕೋಟಿ ಮಾನನಷ್ಟ ಮೊಕದ್ದಮ್ಮೆ ಎದುರಿಸಿ..  ನನಗೆ ನೆಲದ ಕಾನೂನಿನ ಮೇಲೆ ಗೌರವ ಇದೆ. ವಿಶ್ವಾಸವಿದೆ. ಹೀಗಾಗಿಯೇ ನಮ್ಮ ವಕೀಲರ ಮೂಲಕ ನೊಟೀಸ್ ಕಳಿಸಿದ್ದೇನೆ. ನೊಟೀಸ್ ತಲುಪಿದ ಕೂಡಲೇ ಪ್ರತ್ಯುತ್ತರ ನೀಡಬೇಕು. ನಮ್ಮ ಮೇಲೆ ಮಾಡಿರುವ ಆರೋಪಗಳನ್ನು ಹಿಂಪಡೆಯಬೇಕು

ಎಂದು ನಟ ಕಿಚ್ಚ ಸುದೀಪ್ ಆಗ್ರಹಿಸಿದ್ದಾರೆ.

ಅಲ್ಲದೇ, ಕುಮಾರ್​ಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದಡಿ ನಿರ್ಮಾಪಕ ಎಂಎನ್​ ಸುರೇಶ್​ ವಿರುದ್ಧವೂ ನಟ ಕಿಚ್ಚ ಸುದೀಪ್​ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ.

LEAVE A REPLY

Please enter your comment!
Please enter your name here