ಸುಮಲತಾ ಅಂಬರೀಶ್ ಜನ್ಮದಿನದ ಪ್ರಯುಕ್ತ ಇಂದು ಶನಿವಾರ ಅಭಿಷೇಕ್ ಅಂಬರೀಶ್ (Abhishek Ambareesh) ನಟನೆಯ ನೂತನ ಚಿತ್ರ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಈ ಪೋಸ್ಟರ್ಗೆ ನಟ ದರ್ಶನ್ ಶುಭಕೋರಿ ಆಶೀರ್ವದಿಸಿದ್ದಾರೆ.
ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕದ ಮುಂದೆ ಅಭಿಯವರ ನೂತನ AA04 ಚಿತ್ರದ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಅಭಿಷೇಕ್ ಅಂಬರೀಶ್ರ ನೂತನ ಲುಕ್ ಗೆ ಅಭಿಮಾನಿಗಳು ಹರ್ಷವ್ಯಕ್ತಪಡಿಸುತ್ತಿದ್ದಾರೆ. ನಟ ದರ್ಶನ್ ಅವರೂ ಸಹಿತ ಸಹಿತ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೋಷನ್ ಪೋಸ್ಟರ್ ಹಂಚಿಕೊಂಡು ಅಭಿಗೆ ಶುಭಕೋರಿದ್ದಾರೆ.
ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ 'AA04' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನದಿಂದ ನೋಡಿ ಆಶೀರ್ವದಿಸಿ!
👉https://t.co/ge99EyLQ1H pic.twitter.com/10vjAOwcoi
— Darshan Thoogudeepa (@dasadarshan) August 27, 2022
ನೂತನ ಪೋಸ್ಟರ್ ಖಡಕ್ ಆಗಿದ್ದು, ಅಭಿ (Abhishek Ambareesh) ಮಾಸ್ ಲುಕ್ನಲ್ಲಿ ಕಂಡುಬಂದಿದ್ದಾರೆ. ರಾಕ್ಲೈನ್ ವೆಂಕಟೇಶ್ ಬರೋಬ್ಬರಿ 30 ಕೋ.ರೂ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಖಡಕ್ ಆಗಿದೆ ಅಂಬಿ ಪುತ್ರನ ‘AA04’ ಚಿತ್ರದ ಫಸ್ಟ್ ಲುಕ್
ಮದಗಜ ಖ್ಯಾತಿಯ ಮಹೇಶ್ ಕುಮಾರ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನೂ ತಿಳಿದುಬಂದಿಲ್ಲ. 2023ರ ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರಲಿದೆ ಎಂಬ ಬಗ್ಗೆ ಮಾಹಿತಿ ದೊರಕಿದೆ