ಹೊಸ ಕಾರು ಖರೀದಿಸಿದ ನಟ ದರ್ಶನ್ – ದಾಸನ ಬಳಿ ಎಷ್ಟು ಕಾರುಗಳಿವೆ ಗೊತ್ತೆ.?

ಕಾರ್ ಕಲೆಕ್ಷನ್ ಎಂಬುದು ಹೆಚ್ಚಿನ ಜನರ ಮನದ ಆಸೆ. ಎಲ್ಲಾ ಕಾರುಗಳ ತಮ್ಮ ಬಳಿ ಇರಬೇಕೆಂದು ಬಯಸುವ ಇವರು ಮಾರುಕಟ್ಟೆಗೆ ಬರುವ ಪ್ರಮುಖ ಹಾಗೂ ಬೆಲೆ ಬಾಳುವ ಕಾರುಗಳನ್ನು ಖರೀದಿಸಿ ಇಟ್ಟುಕೊಳ್ಳುತ್ತಾರೆ. ಕನ್ನಡದ ಖ್ಯಾತ ನಟ, ಬಾಕ್ಸ್ ಆಫೀಸ್ ಸುಲ್ತಾನ ಹಾಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರೂ ಸಹಿತ ಇಂತಹ ಕಾರ್ ಕಲೆಕ್ಷನ್ ಮಾಡುವ ಹವ್ಯಾಸ ಹೊಂದಿದ್ದಾರೆ. ಇದೀಗ, ನಟ ದರ್ಶನ್ ಕೋಟ್ಯಾಂತರ ರೂ ಮೌಲ್ಯದ ಹಲವು ಕಾರುಗಳ ಒಡೆಯರಾಗಿದ್ದಾರೆ.

ನಟ ದರ್ಶನ್ ಬೆಲೆ ಬಾಳುವ ಕಾರುಗಳನ್ನು ಖರೀಸಿದಿದಾಗೆಲ್ಲ ಸುದ್ದಿಯಲ್ಲಿ ಇರುತ್ತಾರೆ. ಇದೀಗ ನಟ ದರ್ಶನ್ 2.13 ಕೋ.ಟಿ ರೂ ಬೆಲೆ ಬಾಳುವ ಲ್ಯಾಂಡ್ ರೋವರ್ ಢಿಪೆಂಡರ್ ಎಸ್​ಯುವಿ ಕಾರನ್ನು ಖರೀದಿಸುವ ಮೂಲಕ ಮತ್ತೊಮ್ಮೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ.

ಈ ಮೊದಲು ದರ್ಶನ್ ಲ್ಯಾಂಬೋರ್ಗಿನಿ, ಹಮ್ಮರ್ ನಂತರ ಬೆಲೆ ಬಾಳುವ ಕಾರುಗಳನ್ನು ಖರೀಸಿದಾಗಲೂ ಸುದ್ದಿಯಲ್ಲಿದ್ದರು. ಆದರೆ, 2018 ರಲ್ಲಿ ಇವರು ವಿಜಯ ದಶಮಿಯಂದು ಎಲ್ಲಾ ಕಾರುಗಳನ್ನು ಪೂಜೆ ಮಾಡಲು ಹೊರಗಡೆ ತಂದಿದ್ದರು. ಆಗ ದರ್ಶನ್​ರ ಕಾರಿನ ಕ್ರೇಜ್ ಬಗ್ಗೆ ಅವರ ಅಭಿಮಾನಿಗಳಿಗೆ ತಿಳಿದಿತ್ತು.

ದರ್ಶನ್ ಪ್ರತಿಯೊಂದು ಕಾರನ್ನು ಖರೀಸಿದಿದಾಗಲೂ ಆ ಕಾರಿನ ಬೆಲೆ ಹಾಗೂ ಅದರಲ್ಲಿನ ಸೌಲಭ್ಯಗಳ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತವೆ. ದರ್ಶನ್ ಇದೀಗ ಲ್ಯಾಂಡ್ ರೋವರ್ ಢಿಪೆಂಡರ್ ಎಸ್​ಯುವಿ ಕಾರು ಖರೀದಿಸಿದ್ದಾರೆ. ನಟ ದರ್ಶನ ಅವರ ಬಳಿ ಇರುವ ಕಾರುಗಳೆಷ್ಟು..? ಆ ಕಾರುಗಳ ಬೆಲೆ ಎಷ್ಟಿದೆ.? ಎನ್ನುವ ಮಾಹಿತಿಯನ್ನು ನೊಡೋಣ.

 1. ಜಾಗ್ವಾರ್ ಕಾರು : ಜಾಗ್ವಾರ್ ಕಾರನ್ನು ನಟ ದರ್ಶನ ಪತ್ನಿ ವಿಜಯಲಕ್ಷ್ಮಿಯವರು ಉಡುಗೊರೆ ನೀಡಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 88 ಲಕ್ಷ ರೂ.ಗಳಾಗಿವೆ.
 2. ಪೋರ್ಷೆ (Porsche) ಕಾರು : ಪೋರ್ಷೆ ಕಾರನ್ನು ನಿರ್ಮಾಪಕ ಸಂದೇಶ್ ನಾಗರಾಜ್ ಉಡುಗೊರೆ ನೀಡಿದ್ದಾರೆ. ಈ ಕಾರಿನ ಬೆಲೆ  84 ಲಕ್ಷ ರೂ.ಗಳಾಗಿವೆ.
 3. ಆಡಿ ಕ್ಯೂ 7 ಕಾರು : ನಟ ದರ್ಶನ್ ಆಡಿ ಕ್ಯೂ 7 ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ 80 ಲಕ್ಷ ರೂ.ಗಳಾಗಿದೆ. ಈ ಕಾರನ್ನು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು ಬಳಸುತ್ತಾರೆ ಎನ್ನಲಾಗಿದೆ.
 4. ಆಡಿ ಟಿಟಿ ಕಾರು : ನಟ ದರ್ಶನ್ ಈ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ 66 ಲಕ್ಷ ರೂ.ಗಳು.
 5. ಐ – 20 ಕಾರು : ಐ-20 ಕಾರನ್ನೂ ನಟ ದರ್ಶನ್ ಖರೀದಿಸಿದ್ದಾರೆ. ಈ ಕಾರನ್ನು ಪುತ್ರ ವಿನೀಶ್ ಗೆ ಉಡುಗೊರೆಯನ್ನಾಗಿ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರಿನ ಬೆಲೆ 11 ಲಕ್ಷ ರೂ.ಗಳು.
 6. ರೇಂಜ್ ರೋವರ್ ವೋಗ್ – ನಟ ದರ್ಶನ್ ರೇಂಜ್ ರೋವರ್ ವೋಗ್ ಕಾರನ್ನೂ ಖರೀದಿಸಿದ್ದಾರೆ. ಈ ಕಾರು ಖರೀದಿಸಿದ ನಂತ ನಟ ದರ್ಶನ್ ಸಾಕಷ್ಟು ಸುದ್ದಿಯಲ್ಲಿದ್ದರು. ಈ ಕಾರಿನ ಬೆಲೆ 2 ಕೋಟಿ ರೂಗಳು.
 7. ಟಾಟಾ ಕಂಪೆನಿಯ ಫಾರ್ಚೂನರ್ ಹಾಗೂ ಇನ್ನೋವಾ ಕಾರುಗಳು :  ಟಾಟಾ ಕಂಪೆನಿಯ ಫಾರ್ಚೂನರ್ ಹಾಗೂ ಇನ್ನೋವಾ ಕಾರುಗಳನ್ನೂ ದರ್ಶನ್ ಖರೀದಿಸಿದ್ದಾರೆ. ಫಾರ್ಚೂನರ್ ಕಾರಿನ ಬೆಲೆ 32 ಲಕ್ಷ ರೂ.ಗಳು ಮತ್ತು ಇನ್ನೋವಾ ಕಾರಿನ ಬೆಲೆ 25 ಲಕ್ಷ ರೂ.ಗಳಾಗಿವೆ.
 8. ಬೆಂಜ್ ಕಾರು : ನಟ ದರ್ಶನ್ ಈ ಕಾರನ್ನು ಖರೀದಿಸಿದ ನಂತರ ಮತ್ತೆ ಸುದ್ದಿಯಲ್ಲಿದ್ದರು. ಈ ಕಾರಿನ ಬೆಲೆ 42 ಲಕ್ಷ ರೂ.ಗಳು.
 9. ಮಿನಿ ಕೂಪರ್ ಕಾರು : ನಟ ದರ್ಶನ ಅವರ ಕಾರುಗಳ ಕಲೆಕ್ಷನ್ ಮಿನಿ ಕೂಪರ್ ಪ್ರತಿಷ್ಠಿತ ಕಾರು ಇದೆ. ಈ ಕಾರಿನ ಬೆಲೆ 41 ಲಕ್ಷ ರೂ.ಗಳು.
 10. ಹಮ್ಮರ್ ಹೆಚ್​ 3 ಕಾರು : ದುಬಾರಿ ಬೆಲೆಯ ಈ ಕಾರನ್ನು ದರ್ಶನ್ ದುಬೈನಿಂದ ತರಿಸಿಕೊಂಡಿದ್ದರು. ಈ ಕಾರನ್ನು ಮಾರಾಟ ಮಾಡಿ ಲ್ಯಾಂಬೋರ್ಗಿನಿ ಕೊಂಡುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರಿನ ಬೆಲೆ ಬರೋಬ್ಬರಿ 80 ಲಕ್ಷ ರೂ.ಗಳು.
 11. ಲ್ಯಾಂಬೋರ್ಗಿನಿ  ಕಾರು :  ನಟ ದರ್ಶನ್ ಲ್ಯಾಂಬೋರ್ಗಿನಿ ಬಿಳಿ ಬಣ್ಣದ ಕಾರನ್ನು ಖರೀದಿಸಿದ ನಂತರ ಮತ್ತೆ ಸುದ್ದಿಯಲ್ಲಿದ್ದರು. ಈ ಕಾರಿನ ಬೆಲೆ ಬರೋಬ್ಬರಿ 5 ಕೋ.ರೂಗಳಾಗಿವೆ. ಬೆಂಗಳೂರಿನಲ್ಲಿ ಕೆಲವು ಜನರಲ್ಲಿ ಮಾತ್ರ ಈ ಕಾರಿದೆ.
 12. ಲ್ಯಾಂಬೋರ್ಗಿನಿ ಉರುಸ್ ಕಾರು : ಲ್ಯಾಂಬೋರ್ಗಿನಿ ಬಿಳಿ ಬಣ್ಣದ ಕಾರು ಖರೀದಿಸಿದ ಕೆಲವೇ ತಿಂಗಳುಗಳಲ್ಲಿ, ಹಳದಿ ಬಣ್ಣದ ಕಾರು ಖರೀದಿಸಿದ್ದರು. ಈ ಕಾರಿನ ಬೆಲೆ 3.5 ಕೋಟಿ ರೂ.ಗಳಾಗಿದೆ. ಈ ಕಾರನ್ನು ಒಂದು ಗಂಟೆಗೆ 305 ಕಿ.ಮೀಟರ್ ವೇಗದಲ್ಲಿ ಚಲಾಯಿಸಬಹುದು. ಈ ಕಾರಿನಲ್ಲಿ 3ಡಿ ಸೌಂಡ್ ಸಿಸ್ಟಂ ಹಾಗೂ 360 ಕ್ಯಾಮೆರಾ ನೋಟದ ಸೌಲಭ್ಯಗಳಿವೆ. 
 13. ಲ್ಯಾಂಡ್ ರೋವರ್ ಢಿಪೆಂಡರ್ ಎಸ್​ಯುವಿ – ಇದೀಗ ನೂತನವಾಗಿ ನಟ ದರ್ಶನ್ ಖರೀದಿಸಿರುವ ಕಾರು ಇದಾಗಿದೆ. ಈ ಕಾರು ಖರೀದಿಸುವ ಮೂಲಕ ದರ್ಶನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಕಾರಿನ ಬೆಲೆ 2.13 ಕೋಟಿ ರೂ.ಗಳಾಗಿದೆ.       

ನಟ ದರ್ಶನ್ ಅವರ ಕಾರಿನ ಕ್ರೇಜ್ ಬಗ್ಗೆ ಎಲ್ಲರಿಗೂ ತಿಳಿದಿರುವಂತಹುದೇ. ಪ್ರಸ್ತುತ ಕನ್ನಡದ ನಟರಲ್ಲೇ ಅತಿ ಹೆಚ್ಚು ಕಾರು ಕಲೆಕ್ಷನ್ ಹಾಗೂ ಅತಿ ಹೆಚ್ಚು ಮೌಲ್ಯದ ಕಾರನ್ನು ಹೊಂದಿದ ನಟ ಎಂಬ ಹೆಗ್ಗಳಿಕೆಯನ್ನು ನಟ ದಾಸ ದರ್ಶನ್ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here