ವ್ಯಕ್ತಿ ಮೇಲ್ಮಟ್ಟಕ್ಕೆ ಏರುತ್ತಾ ಹೋದಂತೆ ಅವರ ಬಗ್ಗೆ ಹಲವಾರು ಗಾಸಿಪ್ಗಳು, ಅಂತೆ ಕಂತೆಗಳು ಹುಟ್ಟಿಕೊಳ್ಳುತ್ತವೆ. ಇನ್ನು ಆ ವ್ಯಕ್ತಿ ಸಿನಿಮಾದಲ್ಲಿ ಇದ್ದು, ಹಂತಹಂತವಾಗಿ ಬೆಳೆಯುತ್ತಿದ್ದರಂತೂ ಕೇಳುವುದೇ ಬೇಡ. ಈಗ ಕನ್ನಡದ ಪ್ರಮುಖ ನಟನ ವಿಚಾರದಲ್ಲಿಯೂ ಹೀಗೆಯೇ ಆಗಿದೆ.
ನಟ ಡಾಲಿ ಧನಂಜಯ್ ಸಿನಿಮಾ ಕ್ಷೇತ್ರದ ಜೊತೆಗೆ ರಾಜಕೀಯಕ್ಕೂ ಬರಲಿದ್ದಾರಾ.? ಅವರು ಶಿವಲಿಂಗೇಗೌಡರ ಬದಲಿಗೆ ಅರಸೀಕೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರಾ.? ಎನ್ನುವ ಪ್ರಶ್ನಾರ್ಥಕ ಸುದ್ದಿಯನ್ನು ಒಂದು ಸುದ್ದಿ ಸಂಸ್ಥೆ ಮಾಡಿತ್ತು. ಇದರಿಂದ ಅಸಮಾಧಾನಗೊಂಡಿರುವ ನಟ ಧನಂಜಯ್ ಈ ಸುದ್ದಿಗೆ ತಮ್ಮ ಸ್ಟಷ್ಟನೆ ನೀಡಿದ್ದು, ನಾನು ಸಿನಿಮಾದಲ್ಲಿ ಸದ್ಯಕ್ಕೆ ಬ್ಯುಸಿಯಾಗಿದ್ದೀನಿ, ಈ ರೀತಿಯ ವಿಚಾರಗಳೆಲ್ಲವೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ʼನಾನು ಶೂಟಿಂಗ್ ನಲ್ಲಿ ಎಷ್ಟು ಮುಳುಗಿ ಹೋಗಿದಿನಿ ಅಂದ್ರೆ ನನಗೆ ಈ ತರ ಒಂದು ಸುದ್ದಿ ಆಗಿದೆ ಅನ್ನೋದೆ ಗೊತ್ತಾಗಿರಲಿಲ್ಲ. ಈ ವಿಷಯಕ್ಕೂ ನನಗೂ , ರಾಜಕೀಯಕ್ಕು ನನಗೂ ಯಾವುದೆ ಸಂಬಂಧ ಇಲ್ಲ. ಕಲಾವಿದನಾಗಿ ಜನ ಸ್ವೀಕರಿಸಿ ಅಪ್ಪಿದ್ದಾರೆ.
ನೂರಾರು ಪಾತ್ರಗಳ ಮೂಲಕ ಅಭಿಮಾನಿ ದೇವರುಗಳ ರಂಜಿಸುವ ಕೆಲಸವಷ್ಟೆ ನನ್ನದು ಎಂದು ಹೇಳಿದ್ದಾರೆ.
ಜೆಡಿಎಸ್ ನಾಯಕರಾದ ಹೆಚ್ಡಿ ಕುಮಾರಸ್ವಾಮಿ ಹಾಗೂ ದೇವೇಗೌಡ ಅವರು ತಮ್ಮದೇ ಶಾಸಕ ಶಿವಲಿಂಗೇಗೌಡರ ವಿರುದ್ಧ ಬಹಿರಂಗ ವೇದಿಕೆಯಲ್ಲಿ ಕಿಡಿಕಾರಿದ್ದರು. ಇದರಿಂದ ಅರಸೀಕೆರೆಯ ಶಾಸಕ ಶಿವಲಿಂಗೇಗೌಡರು ಅಸಮಾಧಾನಗೊಂಡಿದ್ದಾರೆ ಎನ್ನಲಾದ್ದು, ಈ ಬೆನ್ನಲ್ಲೇ ಅವರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ADVERTISEMENT
ADVERTISEMENT