ಭೂ ಖರೀದಿಯಲ್ಲಿ ರಿಯಲ್ ಎಸ್ಟೇಟ್ ಕಂಪನಿ ತಮಗೆ ವಂಚಿಸಿದೆ ಎಂದು ಆರೋಪಿಸಿ ನಟ ಮತ್ತು ಕನ್ನಡದಲ್ಲಿ ಜನಪ್ರಿಯು ಶೋಗಳನ್ನು ನಡೆಸಿಕೊಡುವ ನಿರೂಪಕ ಆನಂದ್ ಹೆಚ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆನಂದ್ ಅವರು ಕೊಟ್ಟ ದೂರು ಆಧರಿಸಿ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಲ್ಟಿ ಲೀಪ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕ ಸುಧೀರ್ ಎಸ್ ಮತ್ತು ಅವರ ಸಹಾಯಕಿ ಮಣಿಕಾ ಕೆ ಎಂ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೆಂಗೇರಿಯ ಕೊಮ್ಮಘಟ್ಟದಲ್ಲಿ ನಿವೇಶನ ಖರೀದಿಗಾಗಿ 18.5 ಲಕ್ಷ ರೂಪಾಯಿಯನ್ನುಆನಂದ್ ಅವರು ನೀಡಿ ಒಪ್ಪಂದವನ್ನೂ ಮಾಡಿಕೊಂಡಿದ್ದರು. 70 ಲಕ್ಷ ರೂಪಾಯಿಗೆ ನಿಗದಿಯಾಗಿದ್ದ ನಿವೇಶನದ ಉಳಿದ ಮೊತ್ತಕ್ಕಾಗಿ ಸಾಲದ ವ್ಯವಸ್ಥೆ ಮಾಡಿಸುವುದಾಗಿ ರಿಯಲ್ ಎಸ್ಟೇಟ್ ಕಂಪನಿಯವರು ಹೇಳಿದ್ದರು.
ಆದರೆ ನಿವೇಶನ ಖರೀದಿಗೆ ಸಾಲದ ವ್ಯವಸ್ಥೆ ಮಾಡಿಲ್ಲ ಮತ್ತು ಆ ನಿವೇಶನವನ್ನು ಬೇರೆಯವರಿಗೆ ಮಾರಲಾಗಿದೆ ಎಂದು ನಟ ಆನಂದ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ADVERTISEMENT
ADVERTISEMENT