ಪಾವಗಡದ ಕಣಿವೆನಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದು, ರಾಮಗಿರಿ ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ.
ರಾಂಗ್ ಸೈಡ್ ನಲ್ಲಿ ವೇಗವಾಗಿ ಬಂದ ಬೈಕ್ ಸವಾರರು, ಟಾಟಾ ಏಸ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಗಾಬರಿಯಲ್ಲಿ ಟಾಟಾ ಏಸ್ ಚಾಲಕನಿಗೆ ಗಾಡಿ ನಿಲ್ಲಿಸಲು ಆಗಿಲ್ಲ. ಪರಿಣಾಮ ಬೈಕ್ ಸವಾರನನ್ನು ಸುಮಾರು 200 ಮೀಟರ್ ದೂರ ಟಾಟಾ ಏಸ್ ಎಳೆದೋಯ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರರು ತೀವ್ರ ರಕ್ತ ಸ್ರಾವದಿಂದ ನರಳಿ ನರಳಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ರಾಮಗಿರಿ ಮೂಲದ ಇಬ್ಬರ ಮೃತದೇಹಗಳನ್ನು ಪಾವಗಡ ತಾಲೂಕು ಆಸ್ಪತ್ರೆಯ ಶವಗಾರದಲ್ಲಿ ಇರಿಸಿಲಾಗಿದೆ. ಕೆಲವೇ ಕ್ಷಣಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಟಾಟಾ ಏಸ್ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.