ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ದಂಪತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಹಾರೈಸಿದ್ದಾರೆ.
ಇವತ್ತು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ನವದಂಪತಿಗೆ ಶುಭ ಹಾರೈಸಿದರು.
ADVERTISEMENT
ಸಿಎಂ ಸಿದ್ದರಾಮಯ್ಯ ಅವರಿಗೆ ವಸತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಜೊತೆಗಿದ್ದರು.
ಬಳಿಕ ಫುಡ್ಕೋರ್ಟ್ನಲ್ಲಿ ಸ್ನ್ಯಾಕ್ಸ್ ಸೇವಿಸುವ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸಿದ್ದರಾಮಯ್ಯ ಅವರಿಗೆ ಮುಖಾಮುಖಿಯಾಗಿ ಇಬ್ಬರೂ ನಾಯಕರು ಕುಶಲೋಪರಿ ವಿಚಾರಿಸಿಕೊಂಡರು.
ಮದುವೆ ಮಂಟಪಕ್ಕೆ ಬರುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆಗಳು ಕೇಳಿಬಂದವು. ಬಳಿಕ ತಮ್ಮ ಅಭಿಮಾನಿಗಳತ್ತ ಸಿದ್ದರಾಮಯ್ಯ ಅವರು ಕೈ ಬೀಸಿದರು.
ADVERTISEMENT