ಫಮಜಾಬ್ನ ಪಟಿಯಾಲ ಗ್ರಾಮೀಣ ಕ್ಷೇತ್ರದ ಆಮ್ ಆದ್ಮ ಪಕ್ಷದ ಶಾಸಕ ಬಲ್ಬೀರ್ ಸಿಂಗ್, ಪತ್ನಿ ಹಾಗೂ ಮಗನ ವಿರುದ್ಧದ ಕ್ರಿಮಿನಲ್ ಪ್ರಕರಣವೊಂದರಲ್ಲಿ ಅಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.
ಶಾಸಕ ಬಲ್ಬೀರ್ ಸಿಂಗ್ ಅವರನ್ನಿ ಒಳಗೊಂಡಂತೆ ಮೂವರಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ.ಗಳ ದಂಡ ವಿಧಿಸಿ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ರವಿ ಇಂದರ್ ಸಿಂಗ್ ಅವರು ತೀರ್ಪು ನೀಡಿದ್ದಾರೆ. ಆದರೆ, ಅವರಿಗೆ ಸ್ಥಳದಲ್ಲೇ ಜಾಮೀನು ನೀಡಲಾಯಿತು ಎಂದು ತಿಳಿದುಬಂದಿದೆ.
ಬಲ್ಬೀರ್ ಸಿಂಗ್ ವಿರುದ್ಧ ಜೂನ್ 13, 2011 ರಂದು ಅವರ ಪತ್ನಿಯ ಸಹೋದರಿ ರೂಪಿಂದರ್ಜಿತ್ ಕೌರ್ ಮತ್ತು ಆಕೆಯ ಪತಿ ಮೇವಾ ಸಿಂಗ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರೂಪಿಂದರ್ ಕೌರ್ ಹಾಗೂ ಆಕೆಯ ಪತಿ ಮೇವಾ ಸಿಂಗ್ ಅವರು ತಮ್ಮ ಹೊಲಗಳಿಗೆ ನೀರುಣಿಸಲು ಚಮ್ಕೌರ್ ಸಾಹಿಬ್ ಬಳಿಯ ತಪ್ಪರಿಯನ್ ಡಯಲ್ ಸಿಂಗ್‌ನಲ್ಲಿದ್ದಾಗ ಡಾ.ಬಲ್ಬೀರ್ ಸಿಂಗ್ ಮತ್ತು ರಾಹುಲ್ ಮತ್ತು ಪರ್ಮಿಂದರ್ ಸಿಂಗ್ ಸೇರಿದಂತೆ ಇತರ ಆರೋಪಿಗಳು ತಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಆರೋಪಿಸಿ ದೂರು ದಾಖಲಿಸಿದ್ದರು.