ಪಂಜಾಬ್ನ ಸಂಗ್ರೂರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಸೋಲು ಕಂಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ್ ಆಪ್ಗೆ ಮೊದಲ ಉಪ ಚುನಾವಣೆಯಲ್ಲೇ ಮುಖಭಂಗವಾಗಿದೆ. ಈಗಿನ ಸಿಎಂ ಮನ್ ಪ್ರತಿನಿಧಿಸಿರುವ ಕ್ಷೇತ್ರದಲ್ಲೇ ಆಪ್ ಸೋತಿರುವುದು ಆಪ್ಗೆ ಆಘಾತ ನೀಡಿದೆ.
ಶಿರೋಮಣಿ ಅಕಾಲಿದಳ (ಅಮೃತಸರ)ದ ಸಿಮ್ರಜಿತ್ ಸಿಂಗ್ ಮನ್ ಅವರು ಗೆಲುವು ಸಾಧಿಸಿದ್ದಾರೆ. ಮಾರ್ಚ್ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಇವರನ್ನು ಆಪ್ ಪಕ್ಷದ ಅಭ್ಯರ್ಥಿ ಸೋಲಿಸಿದ್ದರು. ಆ ಸೋಲಿಗೆ ಲೋಕಸಭಾ ಉಪ ಚುನಾವಣೆಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.
ಸಿಮ್ರಜಿತ್ ಸಿಂಗ್ ಮನ್ ಅವರು 253154 ಮತಗಳನ್ನು ಪಡೆದರೆ, ಆಪ್ನ ಗುರ್ಮೈಲ್ ಸಿಂಗ್ 247332 ಮತಗಳನ್ನು ಪಡೆದಿದ್ದಾರೆ.
ಸಂಗ್ರೂರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಭಗವಂತ್ ಸಿಂಗ್ ಮನ್ ಅವರು ಸಿಎಂ ಆದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿತ್ತು.
ಈ ಸೋಲಿನೊಂದಿಗೆ ಪಂಜಾಬ್ನಲ್ಲಿ ಒಂದೂ ಲೋಕಸಭಾ ಕ್ಷೇತ್ರದಲ್ಲಿ ಈಗ ಆಪ್ ಸಂಸದರಿಲ್ಲ. 2019ರಲ್ಲಿ ಗೆದ್ದಿದ್ದ ಒಂದು ಸೀಟನ್ನು ಈಗ ಆಪ್ ಕಳೆದುಕೊಂಡಿದೆ.