ಚುನಾವಣಾ ವರ್ಷದಲ್ಲಿ ಹಿಮಾಚಲ ಪ್ರದೇಶದ ಎಎಪಿಗೆ ಅಘಾತ ಎದುರಾಗಿದೆ. ರಾಜ್ಯದ ಎಎಪಿ ಘಟಕದ ಅಧ್ಯಕ್ಷ ಅನೂಪ್ ಕೇಸರಿಯವರು ಇತರೆ ಇಬ್ಬರು ಅಭ್ಯರ್ಥಿಗಳೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಅನೂಪ್ ಕೇಸರಿಯವರು ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬುಧವಾರ ರಾಜ್ಯದ ಮಂಡಿಯಲ್ಲಿ ನಡೆದ ರೋಡ್ ಷೋನಲ್ಲಿ ಎಎಪಿ ರಾಷ್ಟಿçÃಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರ್ಯಕರ್ತರನ್ನು ಅವಮಾನಿಸಿದ ನಂತರ ಈ ನಿರ್ಧಾರ ತೆರೆದುಕೊಂಡಿದ್ದರು.
ಅನೂಪ್ ಕೇಸರಿಯವರ ಜೊತೆ ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಸತೀಶ್ ಠಾಕೂರ್ ಮತ್ತು ಉನಾ ಜಿಲ್ಲಾ ಎಎಪಿ ಮುಖ್ಯಸ್ಥ ಇಕ್ಬಾಲ್ ಸಿಂಗ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.
श्री @ianuragthakur ने आम आदमी पार्टी के हिमाचल प्रदेश अध्यक्ष श्री अनूप केसरी जी , संगठन महामंत्री श्री सतीश ठाकुर जी व ऊना के अध्यक्ष श्री इक़बाल सिंह जी को राष्ट्रीय अध्यक्ष श्री जगत प्रकाश नड्डा जी की गरिमामयी उपस्थिति में भारतीय जनता पार्टी में शामिल कराया। pic.twitter.com/ADI9cZTRp9
— Office of Mr. Anurag Thakur (@Anurag_Office) April 8, 2022
ಈ ಬಗ್ಗೆ ಮಾತನಾಡಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಅನೂಪ್ ಕೇಸರಿಯವರು ಮಹಿಳೆಯರ ವಿರುದ್ಧ ಅವಹೇಳನಕಾರಿ ಮಾತನಾಡಿದ್ದರು. ಈ ಬಗ್ಗೆ ಹಲವು ಬಾರಿ ನಮಗೆ ದೂರು ಬಂದಿದೆ. ನಾವೇ ಅವರನ್ನು ಹೊರ ಹಾಕುವ ಬಗ್ಗೆ ಚಿಂತಿಸುತ್ತಿದ್ದೆವು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅನೂಪ್ ಕೇಸರಿ, ನಾವು ಪಕ್ಷಕ್ಕಾಗಿ ದಿನದ 24 ಗಂಟೆಯೂ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕಳೆದ 8 ವರ್ಷಗಳಿಂದ ಹಿಮಾಚಲ ಪ್ರದೇಶದಿಂದ ಕೆಲಸ ಮಾಡುತ್ತಿದ್ದೇವೆ. ಆದರೆ, ಅರವಿಂದ್ ಕೇಜ್ರಿವಾಲ್ ಅವರು ರೋಡ್ ಷೋ ವೇಳೆ ಪಕ್ಷದ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ. ಇದು ನಮಗೆ ತುಂಬಾ ಬೇಸರ ತರಿಸಿದೆ. ಅಲ್ಲದೇ, ಈ ರೋಡ್ ಷೋ ವೇಳೆ ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಹಾಗೂ ಭಗವಂತ್ ಮನ್ ಪ್ರಮುಖ ವ್ಯಕ್ತಿಗಳಗಿದ್ದರು. ರಾಜ್ಯದ ಯಾರಿಗೂ ಸ್ಥಾನ ಇರಲಿಲ್ಲ ಎಂದು ಹೇಳಿದ್ದಾರೆ.
3 ಜನ ಎಎಪಿ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದ ಅನುರಾಗ್ ಠಾಕೂರ್ ಮಾತನಾಡಿ, ಹಿಮಾಚಲ ಪ್ರದೇಶದಲ್ಲಿ ನವೆಂಬರ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷ ಅಧಿಕಾರ ಉಳಿಸಲಿಕೊಳ್ಳಲು ಇವರ ಬೆಂಬಲದ ಶಕ್ತಿಯೂ ಇದೆ ಎಂದು ಹೇಳಿದ್ದಾರೆ.