AAP: ಕರ್ನಾಟಕದಲ್ಲಿ ಆಮ್​ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ

ಆಮ್​ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕವಾಗಿದ್ದಾರೆ.

ಈ ಮೂಲಕ 15 ವರ್ಷದಿಂದ ಕರ್ನಾಟಕದಲ್ಲಿ ಆಪ್​ ನಾಯಕತ್ವ ವಹಿಸಿದ್ದ ಪೃಥ್ವಿ ರೆಡ್ಡಿ ಅವರನ್ನು ಆಪ್​ ಈಗ ಬದಲಾಯಿಸಿದೆ.

ಪೃಥ್ವಿ ರೆಡ್ಡಿ ಅವರನ್ನು ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಮುಖ್ಯಮಂತ್ರಿ ಚಂದ್ರು ಅವರು 1 ಬಾರಿ ಶಾಸಕರಾಗಿ 2 ಬಾರಿ ವಿಧಾನ ಪರಿಷತ್​ ಸದಸ್ಯರಾಗಿದ್ದರು.

ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿದ್ದರು.

ಒಂದೂವರೆ ವರ್ಷದ ಹಿಂದೆಯಷ್ಟೇ ಕಾಂಗ್ರೆಸ್​​ಗೆ ರಾಜೀನಾಮೆ ಕೊಟ್ಟು ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

2008ರಲ್ಲಿ ಪೃಥ್ವಿ ರೆಡ್ಡಿ ಕರ್ನಾಟಕದಲ್ಲಿ ಆಪ್​ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದರು.

ಆದರೆ ಕರ್ನಾಟಕದಲ್ಲಿ ಪಕ್ಷದ ಬಲವರ್ಧನೆಗೆ ಚಿರಪರಿಚಿತರನ್ನೇ ರಾಜ್ಯಾಧ್ತಕ್ಷರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಚಂದ್ರು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ.

ಕರ್ನಾಟಕ ದಕ್ಷಿಣ ಭಾಗದ ಸಂಘಟನಾ ಕಾರ್ಯದರ್ಶಿಯಾಗಿ ಬಿ ಟಿ ನಾಗಣ್ಣ ಮತ್ತು ಉತ್ತರ ಕರ್ನಾಟಕ ಭಾಗದ ಸಂಘಟನಾ ಕಾರ್ಯದರ್ಶಿಯಾಗಿ ಅರ್ಜುನ್​ ಪರಪ್ಪ ಹಲಗಿಗೌಡರ್​ ಅವರನ್ನು ನೇಮಿಸಲಾಗಿದೆ.

LEAVE A REPLY

Please enter your comment!
Please enter your name here