ಕಪಿಲಾ ನದಿಯಲ್ಲಿ ಈಜುವ ಸಾಹಸ ಮಾಡಲು ಹೋಗಿ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ವರದಿಯಾಗಿದೆ.
ನಿರಂತರ ಮಳೆಯಿಂದಾಗಿ ಕಪಿಲೆ ತುಂಬಿ ಹರಿಯುತ್ತಿದ್ದಾಳೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಪಿಲೆ ನದಿಗೆ 23 ವರ್ಷದ ಯುವಕ ಅಬ್ದುಲ್ ರಹೀಂ ಪಾಷಾ ಸಾಹಸ ಮಾಡಲು ದುಮುಕಿದ್ದಾನೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೀರಿಗೆ ದುಮುಕಿದ್ದ ಯುವಕ ನೀರು ಪಾಲಾಗಿದ್ದಾನೆ.
3 ಜನ ಯುವಕರು ನೀರಿಗೆ ದುಮುಕಿದ್ದಾರೆ. ಇಬ್ಬರು ಯುವಕರು ಈಜುತ್ತಾ ದಂಡೆಗೆ ಬಂದಿದ್ದು ರಹೀಮ್ ಪಾಷಾ ನೀರಿನ ರಭಸಕ್ಕೆ ಸಿಕ್ಕು ನಾಪತ್ತೆಯಾಗಿದ್ದಾನೆ.
ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳದ ಪೊಲೀಸರು ರಹೀಂ ಪಾಷಾಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನು, ಅಬ್ದುಲ್ ರಹೀಂ ಪಾಷಾ ಅವರ ತಂದೆ ಮುನಾವರ್ ಪಾಷಾ ಅವರು ಮಗನ ಜೊತೆ ಈಜಿದ್ದ ಯುವಕರ ಮೇಲೆ ಗಂಭಿರ ಆರೋಪ ಮಾಡಿದ್ದಾರೆ. ಮಗನ ಚಪ್ಪಲಿ ಹಾಗೂ ಬಟ್ಟೆ ಜೊತೆಗೆ ಯಾವತ್ತೂ ಈಜಾಡಲ್ಲ. ಆತನ ಜೊತೆಗಿದ್ದ ಯುವಕರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.