ತಿರುಪತಿ ದೇವಸ್ಥಾನಕ್ಕೆ 1 ಕೋಟಿ ದೇಣಿಗೆ ನೀಡಿದ ಮುಸ್ಲಿಂ ಉದ್ಯಮಿ

Abdul Ghani

ತಿರುಪತಿ ವೆಂಕಟೇಶ್ವರ ಸ್ವಾಮಿಯ ಭಕ್ತರಾಗಿರುವ ಚೆನ್ನೈನ ಮುಸ್ಲಿಂ ಉದ್ಯಮಿ ಅಬ್ದುಲ್‌ ಘನಿ (Abdul Ghani) ಎಂಬುವವರು ದೇವಸ್ಥಾನಕ್ಕೆ ಮಂಗಳವಾರ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಪತ್ನಿ ಸುಬೀನಾ ಬಾನು ಮತ್ತು ಮಕ್ಕಳೊಂದಿಗೆ ಮಂಗಳವಾರ ದೇವರ ದರ್ಶನ ಪಡೆದ ಘನಿ ಅವರು ತಿರುಪತಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ಪೀಠೋಪಕರಣ ಹಾಗೂ ಪಾತ್ರೆಗಳನ್ನು ಖರೀದಿಸಲು 87 ಲಕ್ಷ ರೂ. ಹಾಗೂ ಎಸ್‌.ವಿ.ಅನ್ನಪ್ರಸಾದಂ ಟ್ರಸ್ಟ್‌ಗೆ 15 ಲಕ್ಷ ರೂ. ಒದಗಿಸಿದರು.

ತಿರುಪತಿ ತಿರುಮಲ ದೇವಾಲಯ ಸಮಿತಿಯ ಅಧಿಕಾರಿಯೊಬ್ಬರಿಗೆ ಘನಿ ಕುಟುಂಬದವರು ಈ ಮೊತ್ತದ ಡಿ.ಡಿ ಹಸ್ತಾಂತರಿಸಿದರು.

ವೆಂಕಟೇಶ್ವರ, ಅಲ್ಲಾ, ಏಸು ಎಲ್ಲರೂ ಒಂದೇ ಎಂದು ನಂಬಿದ್ದೇನೆ. ನಾನು ವೆಂಕಟೇಶ್ವರ ಸ್ವಾಮಿಯ ಭಕ್ತ. ಸುಮಾರು 25 ವರ್ಷಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ಘನಿ (Abdul Ghani) ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ : ತಿರುಪತಿಯಲ್ಲಿ ನಟಿ ಅರ್ಚನಾ ಗೌತಮ್ ಗಲಾಟೆ – ನಿಜಕ್ಕೂ ಅಂದು ನಡೆದದ್ದೇನು..?

LEAVE A REPLY

Please enter your comment!
Please enter your name here