ಕುಡಿದ ಮತ್ತಿನಲ್ಲಿ ಅಪರಿಚತ ವ್ಯಕ್ತಿಯೋರ್ವ ರೈಲ್ವೇ ಹಳಿಯ ಮೇಲೆ ಮಲಗಿ ಪ್ರಾಣ ಕಳೆದುಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಸಮೀಪ ನಡೆದಿದೆ.
ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ನಿನ್ನೆ ಕಂಠಪೂರ್ತಿ ಕುಡಿದು ಫುಲ್ ಟೈಟ್ ಆಗಿದ್ದ ವ್ಯಕ್ತಿಯೋರ್ವ ರೈಲ್ವೇ ಹಳಿಯ ಮೇಲೆ ಮಲಗಿದ್ದಾನೆ. ಇದನ್ನು ಗಮನಿಸಿದ ರೈಲ್ವೇ ಇಲಾಖೆ ಸಿಬ್ಬಂದಿ ವ್ಯಕ್ತಿ ಮಲಗಿದ್ದ ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ಅಲ್ಲಿಂದ ಕಳುಹಿಸಿದ್ದಾರೆ. ರೈಲ್ವೇ ಇಲಾಖೆ ಸಿಬ್ಬಂದಿ ಹೋದ ನಂತರ ಮತ್ತೆ ಪಾನಮತ್ತ ವ್ಯಕ್ತಿ ಅದೇ ಜಾಗದಲ್ಲಿ ರೈಲ್ವೇ ಹಳಿಯ ಮೇಲೆ ಮಲಗಿದ್ದು, ರಾತ್ರಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಇಂದು ಬೆಳಗ್ಗೆ ರೈಲ್ವೇ ಇಲಾಖೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಪಾನಮತ್ತ ವ್ಯಕ್ತಿಯ ನಜ್ಜುಗುಜ್ಜಾದ ದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯ ಶವವನ್ನು ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ : BIG BREAKING: ಅಪಘಾತದಲ್ಲಿ TATA Sons ಮಾಜಿ ಮುಖ್ಯಸ್ಥ, ಉದ್ಯಮಿ ಸೈರಸ್ ಮಿಸ್ತ್ರಿ ಸಾವು