ಮದುವೆ ಎಂಬುದು ಬದುಕು ಕಂಡುಕೊಂಡ ಶಾಶ್ವತ ನೆರಳು, ಹೊಸ ಜೀವನದ ಸಿಹಿ ಬೆಸುಗೆ. ಜೀವಗಳೆರಡು ಜೀವನ ಪರ್ಯಂತ ಸುಖ ಸಂಸಾರದ ಸೂತ್ರಧಾರರಾಗಲೆಂದು ಗುರು ಹಿರಿಯರು ಭಗವಂತನ ಮುಂದೆ ಅಗ್ನಿ ಸಾಕ್ಷಿಯಾಗಿ ಮನೆ-ಮನಗಳೊಂದಾಗಿ ನಡೆಸುವ ಆಜೀವ ದಿವ್ಯ ಒಡಂಬಡಿಕೆ. ಇಂದು ನಾವು ಎಷ್ಟೋ ವಿವಾಹಗಳನ್ನು ನೋಡುತ್ತೇವೆ, ಆದರೆ ಇಲ್ಲೊಂದು ಅಪರೂಪದ ವಿವಾಹ ಸಮಾರಂಭವೊಂದು ನಡೆದಿದೆ . ಈ ಜೋಡಿಯ ವಿವಾಹದ ಫೋಟೋಗಳು ಇಂಟರ್ನೆಟ್ ನಲ್ಲಿ ಎಲ್ಲರ ಮನಗೆಲ್ಲುತ್ತಿದೆ. 

‌                                                   ಅನೂಪ್‌ ಮತ್ತು ನಿಹಾಲ್ 

ವಿಶೇಷ ಸಾಮರ್ಥ್ಯ ಜೋಡಿಯ ವಿವಾಹ ಸಮಾರಂಭದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಹೌದು ನಾವಿಲ್ಲಿ ಮಾತನಾಡುತ್ತಿರುವುದು ಮುಂಬೈನ ಅನೂಪ್‌ ಮತ್ತು ನಿಹಾಲ್‌ ಜೋಡಿಯ ಕನಸಿನ ವಿವಾಹದ ಬಗ್ಗೆ. ಈ ವಿಶೇಷ ಸಾಮರ್ಥ್ಯ ಜೋಡಿಯ ವಿವಾಹ ಕಳೆದ ವರ್ಷವೇ ನಡೆದಿತ್ತು, ಆದರೆ ಆ ಫೋಟೋಗಳು ಈ ವರ್ಷ ಇಂಟರ್ನೆಟ್ ನಲ್ಲಿ ಹರಿದಾಡುತ್ತಿವೆ. 

‌                                                ಸಬ್ಯಸಾಚಿ ಉಡುಗೆಯಲ್ಲಿ ವಧು ನಿಹಾಲ್

ಇವರಿಬ್ಬರೂ ಕಳೆದ ೭ ವರ್ಷಗಳಿಂದ ಸ್ನೇಹಿತರಾಗಿದ್ದು, ನಂತರ ಪರಸ್ಪರ ಇಷ್ಟ ಪಟ್ಟು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು.

LEAVE A REPLY

Please enter your comment!
Please enter your name here