ಬಾಲಕಿ ಮೇಲೆ ಗ್ಯಾಂಗ್‌ ರೇಪ್-‌ ಬಿಜೆಪಿ ಶಾಸಕ ದೋಷಿ

ಉನ್ನಾವ್‌  ಅಪ್ರಾಪ್ತ ಬಾಲಕಿಯ ಮತ್ತು ಅಪಹರಣ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ ಕುಲ್ ದೀಪ್‌ ಸಿಂಗ್‌ ಸೆಂಗಾರ್ ಮೇಲಿನ ಆರೋಪ ಸಾಬೀತಾಗಿದೆ. 

ಉನ್ನಾವ್ ಅಪ್ರಾಪ್ತ ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯ ಶಾಸಕ ಕುಲ್ ದೀಪ್‌ ಸಿಂಗ್‌ ಸೆಂಗಾರ್ ಸೇರಿದಂತೆ ಹಲವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಆತನನ್ನು ದೋಷಿ ಎಂದು ದಿಲ್ಲಿಯ ತೀಸ್‌ ಹಜಾರಿ ಕೋರ್ಟ್‌ ಸೋಮವಾರ ತೀರ್ಪು ಪ್ರಕಟಿಸಿದೆ. 

2017 ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಿಜೆಪಿಯ ಉಚ್ಛಾಟಿತ (4 ಬಾರಿ ಆಯ್ಕೆಯಾಗಿದ್ದ) ಕುಲ್ ದೀಪ್‌ ದೋಷಿ ಎಂದು ತೀರ್ಪು ನೀಡಿರುವ ಕೋರ್ಟ್‌, ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದೆ. 

LEAVE A REPLY

Please enter your comment!
Please enter your name here