14 ವರ್ಷ ನ್ಯಾಯಾಲಯದಲ್ಲಿ ಕೆಲಸ ಮಾಡಿದ್ದ 72 ವರ್ಷದ ನಕಲಿ ವಕೀಲೆ : ಬಂಧನ

Juducial Jobs

2008 ರಿಂದ ಕಾನೂನು ಪದವಿ ಇಲ್ಲದೇ ವಕೀಲಿಕೆ (Fake Lawyer) ಮಾಡಿಕೊಂಡಿದ್ದ 72 ವರ್ಷದ ಮಹಿಳೆಯನ್ನು ಶನಿವಾರ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತೆಯನ್ನ ಮೊರ್ಡೆಕೈ ರೆಬೆಕಾ ಜೌಬ್ ಅಲಿಯಾಸ್ ಮಂದಾಕಿನಿ ಕಾಶಿನಾಥ್ ಸೋಹಿನಿ ಎಂದು ಗುರುತಿಸಲಾಗಿದೆ. ಈಕೆ ವೆಸ್ಟ್ ಬಂದ್ರಾದ ಪಾಲಿಹಿಲ್​ನಲ್ಲಿ ವಾಸವಾಗಿದ್ದಳು.

ನಕಲಿ ವಕೀಲೆ (Fake Lawyer) ಎನ್ನಲಾದ ಮಂದಾಕಿನಿ 1977 ರಲ್ಲಿ ಸೆಕೆಂಡ್ ಇಯರ್ ಲಾ ಕಾಲೇಜ್​ನಲ್ಲಿ ಎರಡನೇ ವರ್ಷದ ಕಾನೂನೂ ಪದವಿ ಮಾತ್ರ ಅಧ್ಯಯನ ಮಾಡಿದ್ದಾರೆ. ಕಾನೂನು ಪದವಿ ಪೂರ್ಣಗೊಳಿಸದ ಇವರು ನಕಲಿ ಪ್ರಮಾಣಪತ್ರಗಳನ್ನು ಮಾಡಿಸಿಕೊಂಡಿದ್ದಾರೆ. ಈಕೆ ಮುಂಬೈನ ಫ್ಯಾಮಿಲಿ ಮತ್ತು ಸೆಷನ್​ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ : ನಕಲಿ ಗೊಬ್ಬರ ತಯಾರಿಕಾ ಘಟಕದ ಮೇಲೆ ದಾಳಿ

ಈಕೆಯ ವಿರುದ್ಧ ಅಕ್ಬರಲಿ ಮೊಹಮ್ಮದ್ ಖಾನ್ (44) ಎನ್ನುವ ವಕೀಲರು, ಯಾವುದೇ ಕಾನೂನು ಪದವಿ ಇಲ್ಲದೇ, ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜುಲೈ 15 ರಂದು ನಿಮ್ಮ ಕಾನೂನು ಪದವಿಯ ನೈಜತೆಯನ್ನು ತೋರಿಸುವಂತೆ ನೋಟಿಸ್ ನೀಡಿತ್ತು.

ಇದೀಗ, ಮಂದಾಕಿನಿ ಸೋಹಿನಿಯವರು ತಮ್ಮ ಪದವಿಯ ನೈಜತೆಯನ್ನು ತೋರಿಸುವಲ್ಲಿ ವಿಫಲವಾಗಿರುವುದರಿಂದ ಪೊಲೀಸರು ಶನಿವಾರ ಈಕೆಯನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ದೂರುದಾರ ಅಕ್ಬರಲಿ ಖಾನ್ ಅವರು, ಒಂದು ವರ್ಷದ ಹಿಂದೆಯೇ ಮಂದಾಕಿನಿಯವರ ಮೇಲೆ ಸಂಶಯವುಂಟಾಗಿತ್ತು. ಅನಂತರ 1 ವರ್ಷಗಳ ಕಾಲ ಅವರನ್ನು ಹಿಂಬಾಲಿಸಿ ಮಾಹಿತಿ ಕಲೆ ಹಾಕಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ, ಬಾರ್ ಕೌನ್ಸಿಲ್ ಈ ಪ್ರಕರಣಕ್ಕೆ ಜವಾಬ್ದಾರಿಯಾಗಿದೆ. ಬಾರ್ ಕೌನ್ಸಿಲ್ ಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಖ್ಯಾತ ವಕೀಲ ಚೇತನ್​ ವರ್ಮಾ ನಿಧನ

LEAVE A REPLY

Please enter your comment!
Please enter your name here