ಗಣೇಶ ವಿಸರ್ಜನೆಯ ವೇಳೆ 7 ಮಂದಿ ಜಲಸಮಾಧಿ

Ganesh Idols' Immersion
Ganesh Idols' Immersion
ಗಣೇಶ ವಿಸರ್ಜನೆಯ ವೇಳೆ ಏಳು ಮಂದಿ ಜಲಸಮಾಧಿ ಆಗಿದ್ದಾರೆ.
ಹರಿಯಾಣ (Haryana) ರಾಜ್ಯದ ಸೋನಿಪತ್​ನ (Sonipat) ಮಿಮಾಪುರ್​ ಘಾಟ್​ನಲ್ಲಿ ತನ್ನ ಮಗ ಮತ್ತು ಸಂಬಂಧಿಯೊಂದಿಗೆ ವ್ಯಕ್ತಿಯೊಬ್ಬರು ಗಣೇಶ ಮೂರ್ತಿ ವಿಜರ್ಸನೆಗೆ Ganesh Idols Immersion ಇಳಿದಿದ್ದರು. ಆದರೆ ಆ ಮೂವರು ಕೊಚ್ಚಿಕೊಂಡು ಹೋಗಿದ್ದಾರೆ.
ಮಹೇಂದ್ರಘರ್​ನಲ್ಲಿ (Mahendragarh) ಕಾಲುವೆಯಲ್ಲಿ (Canal) ಗಣೇಶನ ವಿಸರ್ಜನೆಗೆ ಹೋಗಿದ್ದವರಲ್ಲಿ 8 ಮಂದಿ ಕೊಚ್ಚಿಹೋದರು. ಇವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಮಹೇಂದ್ರಘರ್​ ಮತ್ತು ಸೋನಿಪತ್​ನಲ್ಲಿ ಆಗಿರುವ ದುರಂತದ ಬಗ್ಗೆ ಹರಿಯಾಣ ಮುಖ್ಯಮಂತ್ರಿ (Haryana CM) ಮನೋಹರ್​ಲಾಲ್​ ಕಟ್ಟರ್​ (Manoharlal Kattar) ಅವರು ಆಘಾತ ವ್ಯಕ್ತಪಡಿಸಿದ್ದಾರೆ.
ಆಗಸ್ಟ್​ 31ರಂದು ಶುರುವಾಗಿದ್ದ ಗಣೇಶೋತ್ಸವ 10 ದಿನಗಳ ಅದ್ಧೂರಿ ಆಚರಣೆಯ ಬಳಿಕ ಕೊನೆ ಆಗಿತ್ತು.

LEAVE A REPLY

Please enter your comment!
Please enter your name here