ರಜೆಯಿಲ್ಲದೆ ನಿರಂತರ ಕೆಲಸ – ಹಾಸನದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯ ನಿಧನ

ಹಾಸನ ಜಿಲ್ಲೆಯ ಆಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಾಗಿದ್ದ ಶಿವಕಿರಣ್‌ ರಜೆಯಿಲ್ಲದೇ ಅತಿಯಾದ ಕೆಲಸದ ಒತ್ತಡದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಐದು ದಿನಗಳಿಂದ ತಲೆನೋವಿನಿಂದ ಬಳಲಿ ಆಸ್ಪತ್ರೆಯಲ್ಲೇ ಕುಸಿದುಬಿದ್ದಿದ್ದ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇವರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು ನೆಗೆಟಿವ್‌ ಬಂದಿದೆ.

ಇವರ ನಿಧನಕ್ಕೆ ಆರೋಗ್ಯ ಇಲಾಖೆಗೆ ಸಂತಾಪ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here