ಗ್ರಾಹಕರಿಗೆ ಹೊರೆ ವರ್ಗಾವಣೆ – ಪೆಟ್ರೋಲ್, ಡೀಸೆಲ್‌ 2 ರೂಪಾಯಿ ದುಬಾರಿ

ನಾಲ್ಕನೇ ದಿನವೂ ಪೆಟ್ರೋಲ್‌-ಡಿಸೇಲ್‌ ದರ ಏರಿಕೆ ಆಗಿದ್ದು ಒಟ್ಟು 2 ರೂಪಾಯಿಯಷ್ಟು ದುಬಾರಿ ಆಗಿದೆ. ಇವತ್ತೂ ಪೆಟ್ರೋಲ್‌ಗೆ ಲೀಟರ್‌ಗೆ 40 ಪೈಸೆಯಷ್ಟು, ಡೀಸೆಲ್‌ಗೆ 46 ಪೈಸೆಯಷ್ಟು ಹೆಚ್ಚಳವಾಗಿದೆ.

4 ದಿನಗಳಿಂದ ಪೆಟ್ರೋಲ್‌ 2 ರೂಪಾಯಿ 14 ಪೈಸೆಯಷ್ಟು, ಡೀಸೆಲ್‌ 2 ರೂಪಾಯಿ 23 ಪೈಸೆಯಷ್ಟು ದುಬಾರಿ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 40 ಡಾಲರ್‌ನಷ್ಟಿದೆ.

ಲಾಕ್‌ಡೌನ್‌ ಅವಧಿಯಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿತ್ತು. ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 10 ರೂಪಾಯಿ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 13 ರೂಪಾಯಿಯಷ್ಟು ಹೆಚ್ಚಳ ಮಾಡಿತ್ತು.

ಆದರೆ ಅಬಕಾರಿ ಸುಂಕವನ್ನು ತೈಲ ಕಂಪನಿಗಳು ಭರಿಸಬೇಕಿರುವ ಕಾರಣ ಗ್ರಾಹಕರಿಗೆ ಹೊರೆ ಆಗಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ ಈಗ ತೈಲ ಕಂಪನಿಗಳು ತಮ್ಮ ಮೇಲಿನ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸ್ತಿವೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕೇಂದ್ರ ಸರ್ಕಾರ 50 ರೂಪಾಯಿಗಳಿಂತಲೂ ಅಧಿಕ ತೆರಿಗೆ ವಿಧಿಸುತ್ತಿದ್ದು ಇದು ಮೂಲ ಬೆಲೆಯ ಶೇಕಡಾ 275ಕ್ಕಿಂತಲೂ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here