600 ಮಂದಿಯನ್ನ ಕೆಲಸದಿಂದ ತೆಗೆದು ಕ್ಷಮೆ ಕೇಳಿದ ಉಬರ್‌..!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾರತದಲ್ಲಿ ಕಂಪನಿಗಳು ನೌಕರಿಗೆ ಕತ್ತರಿ ಹಾಕುತ್ತಿದ್ದು, ಆ ಸಾಲಿನಲ್ಲಿ ಈಗ ಉಬರ್‌ ಸೇರಿಕೊಂಡಿದೆ. ಉಬರ್‌ ತನ್ನ ಸಂಸ್ಥೆಯ 600 ಮಂದಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.

ಜಾಗತಿಕ ಮಟ್ಟದಲ್ಲಿ ಕಂಪನಿ ಕೈಗೊಂಡಿರುವ ವೆಚ್ಚ ಕಡಿತದ ಭಾಗವಾಗಿ ಭಾರತದಲ್ಲೂ 600 ಮಂದಿಯನ್ನು ತೆಗೆದುಹಾಕಲಾಗಿದೆ ಎಂದು ಉಬರ್‌ ಹೇಳಿಕೊಂಡಿದೆ.

ಕಂಪನಿಯ ಗ್ರಾಹಕರು ಮತ್ತು ಡ್ರೈವರ್‌ ಬೆಂಬಲಿತ ಸೇವೆಗಳು, ಕಾನೂನು, ಹಣಕಾಸು, ಮಾರ್ಕೆಟಿಂಗ್‌, ವ್ಯಾಪಾರ ಅಭಿವೃದ್ಧಿ ವಿಭಾಗದಲ್ಲಿ ನೌಕರರು ಕೆಲಸ ಕಳೆದುಕೊಂಡಿದ್ದಾರೆ.

ಈ 600 ಮಂದಿಗೆ ಎರಡೂವರೆ ತಿಂಗಳ ವೇತನವನ್ನು ಹೆಚ್ಚುವರಿ ನೀಡಲಾಗಿದ್ದು, ಕಂಪನಿ ನೀಡಿರುವ ಆರೋಗ್ಯ ವಿಮೆ ಕೆಲಸ ಕಳೆದುಕೊಂಡ 6 ತಿಂಗಳವರೆಗೂ ಅನ್ವಯ ಆಗಲಿದೆ ಎಂದು ಉಬರ್‌ ಹೇಳಿದೆ.

ಉಬರ್‌ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಮುಖ್ಯಸ್ಥ ಪ್ರವೀಣ್‌ ಪರಮೇಶ್ವರ್‌ ಕೆಲಸದಿಂದ ತೆಗೆಯುತ್ತಿರುವುದಕ್ಕೆ ತಮ್ಮ ಸಹೋದ್ಯೋಗಿಗಳ ಕ್ಷಮೆ ಕೋರಿದ್ದಾರೆ.

LEAVE A REPLY

Please enter your comment!
Please enter your name here