ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು 6 ಮಕ್ಕಳನ್ನೂ ಬಾವಿಗೆ ಎಸದು ಕೊಂದಿರುವ ಅಮಾನುಷ ಘಟನೆ ನಡೆದಿದೆ.
ಮಹಾರಾಷ್ಟ್ರದ ರಾಯಗಡ ಜಿಲ್ಲೆಯಮಹಾಡ್ ತಾಲೂಕಿನ ಖರಾವಲಿ ಎಂಬ ಗ್ರಾಮದಲ್ಲಿ ಸೋಮವಾರ ಮದ್ಯಾಹ್ನ ಈ ಘಟನೆ ನಡೆದಿದೆ.
ಐವರು ಬಾಲಕಿಯರು ಸೇರಿದಂತೆ ಆರ ಜನ ಮಕ್ಕಳು ಬಾವಿಯಲ್ಲಿ ಸಾವನ್ನಪ್ಪಿದ್ದಾರ ಎಂದು ಪೊಲೀಸರು ಹೇಳಿದ್ದಾರೆ.
ತನ್ನ ಗಂಡನ ಕುಟುಂಬಸ್ಥರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಕಾರಣಕ್ಕೆ ಕೋಪಗೊಂಡಿದ್ದ 30 ವರ್ಷದ ಮಹಿಳೆ ಈ ಅಮಾನುಷ ಕೃತ್ಯವೆಸಗಿದ್ದಾಳೆ.
ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಮಕ್ಕಳು 18 ತಿಂಗಳಿಂದ 10 ವರ್ಷದೊಳಗಿನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.