ಲಿಂಗಾಯತ ಸಮುದಾಯದ ಶೇ.50 ರಷ್ಟು ಮತಗಳು ಕಾಂಗ್ರೆಸ್​​ಗೆ – ಎಂಬಿ ಪಾಟೀಲ್

Lingayata

ಮುಂದಿನ ಚುನಾವಣೆಗಳಲ್ಲಿ ಲಿಂಗಾಯತ(Lingayata) ಸಮುದಾಯದ ಶೇ ೫೦ ರಷ್ಟು ಮತಗಳು ಕಾಂಗ್ರೆಸ್ ಗೆ ಬರಲಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಹೇಳಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಗಳಲ್ಲಿ ಲಿಂಗಾಯತ(Lingayata) ಸಮುದಾಯದ ಶೇ.50 ರಷ್ಟು ಮತಗಳು ಕಾಂಗ್ರೆಸ್​ಗೆ ಬರಲಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಹೋಗಿದ್ದ ಮತಗಳಲ್ಲಿ ಅರ್ಧದಷ್ಟು ನಮಗೆ ಬರುತ್ತವೆ ಎಂದಿದ್ದಾರೆ.

ಯಡಿಯೂರಪ್ಪರನ್ನ ಬಿಜೆಪಿ ಹೇಗೆ ನಡೆಸಿಕೊಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅವರನ್ನ ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪರದ್ದು ಮುಗಿದ ಅಧ್ಯಾಯ.  ಎರಡು ಭಾರಿ ಅವರಿಗೆ ಪೂರ್ಣ ಅಧಿಕಾರ ಕೊಡಲಿಲ್ಲ. ಅವರಿಂದಲೇ ಆಪರೇಷನ್ ಕಮಲ ಮಾಡಿಸಿ ಅವರನ್ನ ಹೇಗೆ ನಡೆಸಿಕೊಂಡರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : GST: ಮನೆ ಬಾಡಿಗೆಗೂ ಜಿಎಸ್​​ಟಿ..! 

ಸಿಎಂ ಬದಲಾವಣೆ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಬಿಜೆಪಿಯೇ. ಬಿಜೆಪಿಯ ಮಾಜಿ ಶಾಸಕರು ಸಿಎಂ ಬದಲಾವಣೆ ಹೇಳಿಕೆ ಕೊಟ್ರು. ಅಂದ್ರೆ ಗೊಂದಲ ಯಾರಲ್ಲಿ ಇದೆ. ಶಾಸಕರ ಬಗ್ಗೆ ಬಿಜೆಪಿ ಏನ್ ಕ್ರಮ ತೆಗೆದುಕೊಂಡಿದೆ. ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡಿದವರ ಮೇಲೆ ಮೊದಲು ಬಿಜೆಪಿ‌ ಕ್ರಮ ತೆಗೆಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಇನ್ನು ಕಾಂಗ್ರೆಸ್ ಡಬ್ಬಲ್ ಡೋರ್ ಬಸ್ ಅನ್ನೋ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸುಧಾಕರ್ ಎಲ್ಲಿ ಹತ್ತಿದ್ರು, ಎಲ್ಲಿ ಇಳಿದ್ರು, ಎಷ್ಟು ಬಸ್ ಚೇಂಜ್ ಮಾಡಿದ್ರು ಅವರನ್ನೇ ಕೇಳಬೇಕಾಗಿದೆ. ಮತ್ತೆ ಬಂದರೆ ಕಾಂಗ್ರೆಸ್ ಬಸ್ ಹತ್ತಿಸ್ತಾರಾ ಇಲ್ವಾ ಎಂಬುದನ್ನ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

(ನಟ ಗಣೇಶ್, ದಿಗಂತ್, ಪವನ್​ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)

LEAVE A REPLY

Please enter your comment!
Please enter your name here