5 ವರ್ಷಗಳಲ್ಲೇ ದುಬಾರಿ ದುನಿಯಾ -ಇಳಿಯಲ್ವ ಸಾಲದ ಬಡ್ಡಿ ದರ..?

ಆರ್ಥಿಕತೆ ಕುಸಿತದ ಹೊತ್ತಲ್ಲೇ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು ದೇಶದಲ್ಲಿ ಹಣದುಬ್ಬರ ದರ ಶೇಕಡ 7.35ಕ್ಕೆ ಜಿಗಿದಿದೆ. 5 ವರ್ಷಗಳಲ್ಲಿ ಅಂದರೆ ಜುಲೈ 2014ರ ಬಳಿಕ ಇದು ಅತಿ ಹೆಚ್ಚು ಹಣದುಬ್ಬರ  ದರ.

ಡಿಸೆಂಬರ್  ತಿಂಗಳ ಹಣದುಬ್ಬರ ದರ ಆರ್ ಬಿಐ ನಾ ವಾರ್ಷಿಕ  ಮಿತಿ ಶೇಕಡ ನಾಲ್ಕಕ್ಕಿಂತ ಅಧಿಕವಾಗಿದೆ. ಹಣದುಬ್ಬರ ದರ ನಾಗಾಲೋಟದಿಂದಾಗಿ ಆರ್ಬಿಐ ರೆಪೋ ಬಡ್ಡಿದರದಲ್ಲಿ ಕಡಿತ ಮಾಡುವ ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ. ರೆಪೋ ಬಡ್ಡಿದರ ಕಡಿತಗೊಳಿಸಿದ್ದರೆ ಬ್ಯಾಂಕುಗಳಲ್ಲಿ ಸಿಗುವ ಸಾಲದ ಮೇಲಿನ ಬಡ್ಡಿ ದರವು ಕಡಿಮೆಯಾಗಲಿದೆ.

ತರಕಾರಿ ಅದರಲ್ಲೂ ವಿಶೇಷವಾಗಿ ಈರುಳ್ಳಿ ಬೆಲೆ ಏರಿಕೆಯೇ ಹಣದುಬ್ಬರ ಹೆಚ್ಚಳಕ್ಕೆ ಮೂಲ ಕಾರಣ. ನವಂಬರ್ ತಿಂಗಳಲ್ಲಿ ಆಹಾರ ಹಣದುಬ್ಬರ ದರ ಶೇಕಡ 10.01 ರಷ್ಟಿತ್ತು. ಡಿಸೆಂಬರ್ ತಿಂಗಳಲ್ಲಿ 14. 12 ರಷ್ಟಿದೆ.

2018 ರ ಡಿಸೆಂಬರ್ ಗೆ ಹೋಲಿಸಿದರೆ ತರಕಾರಿಗಳ ಬೆಲೆಯಲ್ಲಿ ಶೇಕಡ 60.5 ರಷ್ಟು ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ತಿಳಿಸಿದೆ.

LEAVE A REPLY

Please enter your comment!
Please enter your name here