ಅಪಘಾತದಲ್ಲಿ ಮೃತಪಟ್ಟ ಪಬ್ಲಿಕ್‌ ಟಿವಿ ವರದಿಗಾರನ ಕುಟುಂಬಕ್ಕೆ ಡಿಕೆ ಸುರೇಶ್‌ 5 ಲಕ್ಷ ರೂಪಾಯಿ ನೆರವು

ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತರಾದ ಪಬ್ಲಿಕ್‌ ಟಿವಿಯ ರಾಮನಗರ ಜಿಲ್ಲೆಯ ವರದಿಗಾರ ಹನುಮಂತು ಅವರ ಕುಟುಂಬಕ್ಕೆ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ₹ ‌5,00,000ಗಳ ಪರಿಹಾರ ಚೆಕ್‌ ವಿತರಿಸಿ ಸಾಂತ್ವನ ಹೇಳಿದರು. 

ಹನುಮಂತು ಅವರ ಮನೆಗೆ ತೆರಳಿ ಡಿ ಕೆ ಎಸ್‌ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಚೆಕ್‌ ವಿತರಿಸಿದರು.

ರಾಮನಗರದ ಜಿಲ್ಲಾ ಕಾರಾಗೃಹದ ಬಳಿ ವರದಿ ಮಾಡಿ ಹಿಂದಿರುಗುತ್ತಿದ್ದ ವೇಳೆ ರಾಮನಗರದ ಡಾಬಾ ಬಳಿ ಹಿಂದಿನಿಂದ ಬಂದ ಎಟಿಎಂಗೆ ಹಣ ತುಂಬುವ ವಾಹನ ಹನುಮಂತ ಅವರ ಬೈಕಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು.

ರಾಮನಗರದ ಜೈಲಿನಲ್ಲಿದ್ದ ಪಾದರಾಯನಪುರದಲ್ಲಿ ದೊಂಬಿ ಎಬ್ಬಿಸಿದ ಆರೋಪಿಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಹುನುಮಂತು ಲೈವ್‌ ರಿಪೋರ್ಟಿಂಗ್‌ ಕೊಟ್ಟಿದ್ದ ಕೆಲವೇ ಕ್ಷಣಗಳ ಬಳಿಕ ಅಪಘಾತದಲ್ಲಿ ಮೃತಪಟ್ಟಿದ್ದರು.

ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಕೂಡಾ ಹನುಮಂತು ಪತ್ನಿಗೆ 5 ಲಕ್ಷ ರೂಪಾಯಿಗಳ ಪರಿಹಾರದ ಚೆಕ್‌ ನೀಡಿದ್ದರು.

LEAVE A REPLY

Please enter your comment!
Please enter your name here