ಕುಮಾರಸ್ವಾಮಿ ಪುತ್ರನ ಮದುವೆಗೆ ಖ್ಯಾತ ನಟಿ ಟೀಕೆ.. ಯಾಕೆ ಗೊತ್ತಾ..?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಮದುವೆ ಬಗ್ಗೆ ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಟೀಕೆ ಮಾಡಿದ್ದಾರೆ. ದೇಶಾದ್ಯಂತ ಕೊರೋನಾ ಲಾಕ್‍ಡೌನ್ ಮುಂದುವರೆಯುತ್ತಿರುವ ಸಂದರ್ಭದಲ್ಲಿ ಮದುವೆ ಕಾರ್ಯಕ್ರಮ ನಡೆಸಿದ್ದು ಸರಿಯಲ್ಲ ಎಂದು ರವೀನಾ ಟಂಡನ್ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು ಹೊರವಲಯದ, ರಾಮನಗರ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ನಿಖಿಲ್ ಕುಮಾರಸ್ವಾಮಿ ಕಲ್ಯಾಣ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ಸದಸ್ಯರು, ಆಪ್ತರಷ್ಟೇ ಪಾಲ್ಗೊಂಡಿದ್ದರು. 60ಕ್ಕೂ ಹೆಚ್ಚು ಪಾಲ್ಗೊಂಡಿದ್ದ ಈ ಮದುವೆಯಲ್ಲಿ ಯಾರೋಬ್ಬರು ಮಾಸ್ಕ್ ಧರಿಸಿರಲಿಲ್ಲ. ಕನಿಷ್ಠ ಸಾಮಾಜಿಕ ಅಂತರವನ್ನು ಪಾಲಿಸಿಲ್ಲ. ಕೊರೋನಾ ವಿಜೃಂಭಿಸುತ್ತಿರುವ ಸಂದರ್ಭದಲ್ಲಿಯೇ ಈ ಮದುವೆ ಮಾಡಬೇಕಿತ್ತಾ..? ಎಂದು ಟೀಕೆ, ವಿಮರ್ಶೆಗಳು ಕೇಳಿಬರುತ್ತಿವೆ.

ಕೊರೋನಾ ಲಾಕ್‍ಡೌನ್ ಆಗಿ ಬಡ ಕಾರ್ಮಿಕರಿಗೆ ಇದುವರೆಗೂ ತಮ್ಮ ತಮ್ಮ ಕುಟುಂಬಗಳನ್ನು ಸೇರಿಕೊಳ್ಳಲು ಆಗಿಲ್ಲ. ಹಸಿವಿನಿಂದ ಒದ್ದಾಡುತ್ತಿದ್ದಾರೆ. ಆದ್ರೆ, ಶ್ರೀಮಂಗತರಿಗೆ ಮಾತ್ರ ಕೊರೋನಾ ಲಾಕ್‍ಡೌನ್ ಅನ್ವಯವೇ ಆಗುತ್ತಿಲ್ಲ. ಧನಿಕರು ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಜನ ಸಾಮಾನ್ಯರ ಕಷ್ಟಗಳು ಅವರ ಅರಿವಿಗೆ ಬರುತ್ತಲೇ ಇಲ್ಲ. ಮದುವೆ ಮನೆಯಲ್ಲಿ ಏನೆಲ್ಲಾ ಅಡುಗೆ ಮಾಡಿ ಬಡಿಸಿದ್ರೋ..

ಎಂದು ನಟಿ ರವೀನಾ ಟಂಡನ್ ಪರೋಕ್ಷವಾಗಿ ಟೀಕೆಗಳನ್ನು ಮಾಡಿದ್ದಾರೆ.

LEAVE A REPLY

Please enter your comment!
Please enter your name here