ಇದು 3 ಇಡಿಯಟ್ಸ್ ಪಾರ್ಟ್ 2 – ರೀಲ್ ಅಲ್ಲ ರಿಯಲ್

ರಾಜಸ್ಥಾನದಲ್ಲಿ 3 ಇಡಿಯಟ್ಸ್ ಸಿನಿಮಾ ಮಾದರಿಯ ವಿಚಿತ್ರ ಪ್ರಕರಣವೊಂದು ನಡೆದಿದೆ.

ಆಸ್ಪತ್ರೆಯೊಂದರಲ್ಲಿ ವ್ಹೀಲ್‌ಚೇರ್ ಲಭ್ಯವಿಲ್ಲದ ಕಾರಣ ತಂದೆಯೊಬ್ಬ ತನ್ನ ಗಾಯಾಳು ಪುತ್ರನನ್ನು ಸ್ಕೂಟರ್ ಮೇಲೆ ಕೂರಿಸಿಕೊಂಡು ಆಸ್ಪತ್ರೆಯ ಮೂರನೇ ಮಹಡಿ ತಲುಪಿದ್ದಾರೆ.

ಕೋಟಾ ಜಿಲ್ಲೆಯಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೋಟಾದ ಮನೋಜ್ ಜೈನ್ ವೃತ್ತಿರೀತ್ಯಾ ವಕೀಲರು. ಇತ್ತೀಚಿಗೆ ಅವರ ಮಗನಿಗೆ ಕಾಲು ಫ್ರ್ಯಾಕ್ಚರ್ ಆಗಿತ್ತು. ಬ್ಯಾಂಡೇಜ್ ಬದಲಿಸಲು ಸ್ಥಳೀಯ ಎಂಬಿಎಸ್ ಆಸ್ಪತ್ರೆಗೆ ಕರೆತಂದಿದ್ದರು.

ಆರ್ಥೋಪೆಡಿಕ್ ಸೆಕ್ಷನ್ ಮೂರನೇ ಫ್ಲೋರ್‌ನಲ್ಲಿ ಇತ್ತು. ಆದರೆ, ಮೂರನೇ ಮಹಡಿಗೆ ಕರೆದೊಯ್ಯಲು ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್ ಲಭ್ಯ ಇರಲಿಲ್ಲ.

ಹೀಗಾಗಿ ತಮ್ಮ ಪುತ್ರನನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡ ಮನೋಜ್ ಜೈನ್, ಲಿಫ್ಟ್‌ಗೆ ಎಂಟ್ರಿಕೊಟ್ಟರು.

ಮೂರನೇ ಮಹಡಿಯಲ್ಲಿ ಮಗನಿಗೆ ಕಾಲಿಗೆ ಡ್ರೆಸ್ಸಿಂಗ್ ಮಾಡಿದ ಮನೋಜ್ ಜೈನ್ ಲಿಫ್ಟ್ ಮೂಲಕವೇ ಬೈಕಲ್ಲಿ ವಾಪಸ್ ಆದರು.

ಹೀಗೆ ವಾಪಸ್ ಆಗುವಾ ವಾರ್ಡ್ ಇಂಚಾರ್ಜ್ ಮನೋಜ್ ಜೈನ್‌ರನ್ನು ತಡೆದು ಸ್ಕೂಟರ್ ಬೀಗವನ್ನು ಕಿತ್ತುಕೊಂಡರು.

ಇದಕ್ಕೆ ಮನೋಜ್ ಜೈನ್ ಆಕ್ರೋಶ ಹೊರಹಾಕಿದರು. ವ್ಹೀಲ್ ಚೇರ್ ಕೊಡದ ಕಾರಣ ಹೀಗೆ ಮಾಡಬೇಕಾಯಿತು ಎಂದು ಸ್ಪಷ್ಟೀಕರಣ ನೀಡಿದರೂ ವಾರ್ಡ್ ಇಂಚಾರ್ಜ್ ಕೇಳಿಸಿಕೊಳ್ಳಲಿಲ್ಲ.

ಕಡೆಗೆ ಪೊಲೀಸರು ಮಧ್ಯಪ್ರವೇಶ ಮಾಡಬೇಕಾಯಿತು.