ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿಯ ವಿಶ್ವವಿದ್ಯಾಲಯವೊಂದರಲ್ಲಿ ನಿಲ್ಲಿಸಿದ್ದ ವಾಹನದಲ್ಲಿ ಬಾಂಬ್ ಸ್ಪೋಟಗೊಂಡಿದೆ. ಈ ಸ್ಪೋಟದಲ್ಲಿ ಚೀನಾದ 2 ಮಹಿಳೆಯರನ್ನೊಳಗೊಂಡಂತೆ 3 ಜನ ಹಾಗೂ ಪಾಕಿಸ್ತಾನದ ಇಬ್ಬರು. ಒಟ್ಟಾರೆಯಾಗಿ 5 ಜನ ಸಾವನ್ನಪ್ಪಿದ್ದಾರೆ. ಹಲವು ಜನ ಗಂಭಿರವಾಗಿ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಕರಾಚಿಯ ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಚೀನಾ ಭಾಷೆಯನ್ನು ಕಲಿಸುವ ಲಾಭರಹಿತ ಶಿಕ್ಷಣ ಸಂಸ್ಥೆಯಲ್ಲಿ ಈ ಸ್ಪೋಟ ನಡೆದಿದೆ. ಪೊಲೀಸರ ಮಾಹಿತಿಯಂತೆ 3 ಜನ ಚೀನಿಯರು ಈ ಸ್ಪೋಟದಲ್ಲಿ ಸಾವನ್ನಪ್ಪಿದ್ದಾರೆ. ಅವರೇ ಈ ಸ್ಪೋಟದ ಟಾರ್ಗೆಟ್ ಆಗಿರಬಹುದು ಎಂದು ಹೇಳಿದ್ದಾರೆ.
ಈ ಸ್ಪೋಟದಲ್ಲಿ ಕನ್ಫ್ಯೂಷಿಯಶ್ ಚೀನಾ ಭಾಷೆ ತರಬೇತಿ ಕೇಂದ್ರದ ನಿರ್ದೇಶಕರಾದ ಹುವಾಂಗ್ ಗಿಪಿಂಗ್ ಅವರೂ ಸಾವನ್ನಪ್ಪಿದ್ದಾರೆ. ಈ ಸ್ಪೋಟದ ಹೊಣೆಗಾರಿಕೆಯನ್ನು ‘ಬಲೂಚಿಸ್ತಾನದ ಲಿಬಿರೇಷನ್ ಆರ್ಮಿ’ ವಹಿಸಿಕೊಂಡಿದೆ.
ಈ ಸ್ಪೋಟದಲ್ಲಿ 3 ಜನ ಚೀನಿಯರು. ಒಬ್ಬ ವಾಹನದ ಚಾಲಕ ಹಾಗೂ ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿದ್ದಾರೆ. ವಾಹನದ ಹತ್ತಿರವಿದ್ದ 4 ಜನ ಗಾಯಗೊಂಡಿದ್ದಾರೆ. ಇದರಲ್ಲಿ 3 ಜನ ಗಂಭೀರವಾಗಿದ್ದಾರೆ ಎಂದು ತಿಳಿದು ಬಂದಿದೆ.
ರಿಮೋಟ್ ಆಧಾರಿತ ಬಾಂಬ್ ಅನ್ನು ಈ ಸ್ಪೋಟಕ್ಕೆ ಬಳಸಲಾಗಿದೆ ಎಂದು ಪಾಕಿಸ್ತಾನದ ಹಿರಿಯ ಪೊಲೀಸ್ ಅಧಿಕಾರಿ ಮುಕ್ಕಾದಾಸ್ ಹೈದರ್ ಹೇಳಿದ್ದಾರೆ.
ಪಾಕಿಸ್ತಾನದ ಅತಿದೊಡ್ಡ ನಗರ ಹಾಗೂ ಆರ್ಥಿಕ ರಾಜಧಾನಿಯಲ್ಲಿ ಚೀನಾ ನಾಗರೀಕರನ್ನು ಗುರಿಯಾಗಿಸಿ ಹಲವು ದಾಳಿಗಳನ್ನು ನಡೆಸಲಾಗಿದೆ. ಇದೇನು ಮೊದಲನೆಯದು ಅಲ್ಲ.