3 ಲಕ್ಷ ರೂಪಾಯಿವರೆಗಿನ ಅಲ್ಪಾವಧಿ ಕೃಷಿ ಸಾಲಕ್ಕೆ ಬಡ್ಡಿ ಇಲ್ಲ..! – ಆದರೆ..!

ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದ ಮೇಲಿನ ಮೂರು ಲಕ್ಷ ರೂಪಾಯಿವರೆಗಿನ ಅಲ್ಪಾವಧಿ ಕೃಷಿ ಸಾಲದ ಷರತ್ತುಗಳನ್ನು ಸಡಿಲಗೊಳಿಸಿದೆ.

ಪ್ರತಿ ವರ್ಷವೂ ರೈತರಿಗೆ ರಾಜ್ಯ ಸರ್ಕಾರ ತನ್ನ ಬಜೆಟ್‌ ಘೋಷಣೆಯ ಪ್ರಕಾರ ಮೂರು ಲಕ್ಷ ರೂಪಾಯಿವರೆಗೆ ಬಡ್ಡಿ ಇಲ್ಲದ ಸಾಲವನ್ನು ಸಹಕಾರಿ ಬ್ಯಾಂಕುಗಳ ಮೂಲಕ ವಿತರಿಸುತ್ತದೆ. ಅದು ಈ ವರ್ಷವೂ ಅಂದರೆ ಮುಂದಿನ ವರ್ಷದ ಮಾರ್ಚ್‌ 31ರವರೆಗೂ ಮುಂದುವೆರೆಯಲಿದೆ. ಮುಂದುವರಿಯಲಿದೆ.

ಆದರೆ ಈಗಾಗಲೇ ನೀಡಲಾಗಿರುವ ಶೂನ್ಯ ಬಡ್ಡಿ ಸಾಲದ ವಿಷಯದಲ್ಲಿ ಕೆಲವು ಷರತ್ತುಗಳಲ್ಲಿ ವಿನಾಯ್ತಿ ನೀಡಿದೆ.

ಸರ್ಕಾರದ ಆದೇಶ ಪ್ರಕಾರ:

1) ಈ ಬಡ್ಡಿ ದರ (ಶೂನ್ಯ ಬಡ್ಡಿ ದರವು) ಏಪ್ರಿಲ್‌ 1, 2019ರಿಂದ ಮಾರ್ಚ್‌ 31, 2020ರವರೆಗೆ ನೀಡಲಾದ ಅಲ್ಪಾವಧಿ ಕೃಷಿ ಸಾಲಗಳಿಗೆ ಮಾತ್ರ ಅನ್ವಯ ಆಗಲಿದೆ.

2) ರೈತರು ಸಹಕಾರಿ ಬ್ಯಾಂಕುಗಳಿಗೆ ಮರು ಪಾವತಿ ಗಡುವಿನೊಳಗೆ ಮರು ಪಾವತಿಸಿದರೆ ಮಾತ್ರ ಶೂನ್ಯ ಬಡ್ಡಿ ದರದ ಸೌಲಭ್ಯ ದೊರೆಯುತ್ತದೆ.

3) ನಿಗದಿತ ಗಡುವಿನ ನಂತರ ಸಾಲ ಮರು ಪಾವತಿಸಿದರೆ ಅಂತಹ ಸಾಲಗಳಿಗೆ ಸಾಲ ಪಡೆದ ದಿನಾಂಕದಿಂದ ಸಾಮಾನ್ಯ ಬಡ್ಡಿ ದರದಲ್ಲಿ ರೈತರು ಸಾಲ ಮರು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

೩) ಶೂನ್ಯ ಬಡ್ಡಿ ದರವು 3 ಲಕ್ಷ ರೂಪಾಯಿವರೆಗಿನ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. 3 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಸಾಲಗಳ ಸಂಪೂರ್ಣ ಮೊತ್ತಕ್ಕೆ ಸಾಮಾನ್ಯ ಬಡ್ಡಿ ದರವನ್ನು ಕಟ್ಟಬೇಕಾಗುತ್ತದೆ.

ಈಗಾಗಲೇ ಸಹಕಾರ ಇಲಾಖೆ ಮೇ 31ರೊಳಗೆ ಸಾಲ ಮರು ಪಾವತಿ ಮಾಡುವಂತೆ ರೈತರಿಗೆ ಅದೇಶ ನೀಡಿತ್ತು. ಅಂದರೆ ಜೂನ್‌ 1ರ ಬಳಿಕ ಸಾಲ ಪಾವತಿಸಿದರೆ ಆಗ ಶೂನ್ಯ ಬಡ್ಡಿದರದ ಲಾಭ ಸಿಗಲ್ಲ.

ಇದನ್ನೂ ಓದಿ:

BIG EXCLUSIVE : ಜೂನ್‌ 1ರಿಂದ ಸಾಲ ಕಟ್ಟುವ ರೈತರಿಗೆ ಶೂನ್ಯ ಬಡ್ಡಿ ರಿಯಾಯ್ತಿ ಸಿಗಲ್ಲ..!

LEAVE A REPLY

Please enter your comment!
Please enter your name here