ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ, ಬಿಜೆಪಿಗೆ ಸಮಾಧಾನಕಾರಿ..!

ಪ್ರಾತಿನಿಧಿಕ ಚಿತ್ರ

ಇವತ್ತು ಘೋಷಣೆ ಆದ ನಗರಸಭೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡೂ ನಗರಸಭೆಯಲ್ಲಿ ಕಾಂಗ್ರೆಸ್‌ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಒಂದರಲ್ಲಿ ಬಿಜೆಪಿಗೆ ಪೂರ್ಣಬಹುಮತ ಸಿಕ್ಕಿದೆ. ಉಳಿದ ಎರಡರಲ್ಲಿ ಕಾಂಗ್ರೆಸ್ಸೇ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಂಡಿದೆ.

ಇತ್ತೀಚೆಗಷ್ಟೇ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ಪ್ರತಿನಿಧಿಸುವ ಚಿಕ್ಕಬಳ್ಳಾಪುರದಲ್ಲೇ ಬಿಜೆಪಿಗೆ ಹೀನಾಯ ಸೋಲಾದ್ರೆ, ಎಂ ಟಿ ಬಿ ನಾಗರಾಜ್‌ ಅನುಭವಿಸಿದ್ದ ವಿಧಾನಸಭೆ ಉಪ ಚುನಾವಣೆಯಲ್ಲಿನ ಸೋಲಿಗೆ ಹೊಸಕೋಟೆ ಫಲಿತಾಂಶ ಸಮಾಧಾನ ತಂದುಕೊಟ್ಟಿದೆ. ಆದರೆ ಹುಣಸೂರಲ್ಲಿ ಸೋತಿದ್ದ ವಿಶ್ವನಾಥ್‌ಗೆ ಹುಣಸೂರು ಮತ್ತೊಮ್ಮೆ ಹುಳಿ ಆಗಿದ್ದು ಬಿಜೆಪಿ ಖಾತೆ ತೆರೆದಿದ್ದೇ ದೊಡ್ಡ ಸಾಧನೆ ಆಗಿದೆ.

ಸಿರಗುಪ್ಪ ಪಟ್ಟಣ ಪಂಚಾಯತ್‌ ಬಿಜೆಪಿ ಪಾಲಾದರೆ, ಸಿಂದಗಿ ಪುರಸಭೆಯಲ್ಲಿ ಕಾಂಗ್ರೆಸ್‌ ಅತೀ ದೊಡ್ಡ ಪಕ್ಷವಾಗಿದೆ.

ನಗರಸಭೆಗಳ ಫಲಿತಾಂಶ:

ಹೊಸಕೋಟೆ: ಬಿಜೆಪಿ – 22, ಕಾಂಗ್ರೆಸ್‌ -0, ಜೆಡಿಎಸ್‌-0, ಇತರೆ – 9 ( ಒಟ್ಟು 31 – ಅಗತ್ಯ ಬಹುಮತ – 16)

ಚಿಕ್ಕಬಳ್ಳಾಪುರ : ಬಿಜೆಪಿ – 09, ಕಾಂಗ್ರೆಸ್‌ -16, ಜೆಡಿಎಸ್‌ -02, ಇತರೆ – 04 ( ಒಟ್ಟು- 31, ಬಹುಮತ – 16)

ಹುಣಸೂರು: ಬಿಜೆಪಿ – 03, ಕಾಂಗ್ರೆಸ್‌ -14, ಜೆಡಿಎಸ್‌ – 07 (ಒಟ್ಟು 31 – ಬಹುಮತ – 16)

ಸಿರಗುಪ್ಪ: ಬಿಜೆಪಿ -11, ಕಾಂಗ್ರೆಸ್‌ -19, ಪಕ್ಷೇತರ – 01 ( ಒಟ್ಟು 31, ಬಹುಮತ -16)

ಪಟ್ಟಣ ಪಂಚಾಯತಿ:

ತೆಕ್ಕಲಕೋಟೆ: ಕಾಂಗ್ರೆಸ್‌ -09, ಬಿಜೆಪಿ- 11 ( ಒಟ್ಟು 20, ಬಹುಮತ – 11)

ಸಿಂದಗಿ ಪುರಸಭೆ : ಕಾಂಗ್ರೆಸ್‌ -11, ಬಿಜೆಪಿ – 03, ಜೆಡಿಎಸ್‌ – 06, ಪಕ್ಷೇತರ – 03( ಒಟ್ಟು 23, ಬಹುಮತ -16)

ಇವತ್ತು ಪ್ರಕಟವಾದ  ನಗರಸ್ಥಳೀಯ ಸಂಸ್ಥೆಗಳ 167 ವಾರ್ಡ್‌ಗಳ ಪೈಕಿ 69, ಬಿಜೆಪಿ – 59, ಜೆಡಿಎಸ್‌ – 15, ಪಕ್ಷೇತರರು – 39 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here