ನಿಮ್ಮ ದಾಖಲೆ ಮತ್ತೆ ತೋರಿಸ್ಬೇಕಾಗುತ್ತೆ – ಮುಸ್ಲಿಂ ಮತದಾರರ ಬಗ್ಗೆ ಬಿಜೆಪಿ ಹೇಳಿಕೆ

ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳಿ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವೇಳೆ ಮತ್ತೊಮ್ಮೆ ತೋರಿಸಬೇಕಾಗುತ್ತದೆ. ಇದು ಕರ್ನಾಟಕ ಬಿಜೆಪಿ ಮಹಿಳಾ ಮುಸ್ಲಿಂ ಮಹಿಳಾ ಮತದಾರರ ವೀಡಿಯೋವನ್ನು ಹಾಕಿ ಮಾಡಿದ ಟ್ವೀಟ್‌.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ಸಾಲುಗಟ್ಟಿ ನಿಂತಿದ್ದ ಮುಸ್ಲಿಂ ಮಹಿಳಾ ಮತದಾರರು ತಮ್ಮ ಕೈಯಲ್ಲಿ ಮತದಾರರ ಗುರುತಿನ ಚೀಟಿಯನ್ನು ತೋರಿಸುತ್ತಿರುವ ವೀಡಿಯೋವನ್ನೇ ಉಲ್ಲೇಖಿಸಿ ʻನಾವು ದಾಖಲೆ ತೋರಿಸಲ್ಲʼ ಎಂದು ಮೊಳಗುತ್ತಿರುವ ಘೋಷಣೆಯನ್ನೂ ಉಲ್ಲೇಖಿಸಿ ವ್ಯಂಗ್ಯವಾಡಿದೆ.

ಬಿಜೆಪಿಯ ಈ ಟ್ವೀಟನ್ನು ಖಂಡಿಸಿರುವ ನಟ ಪ್ರಕಾಶ್‌ ರಾಜ್‌ ನಿಮಗೆ ನಾಚಿಕೆ ಆಗ್ಬೇಕೆಂದು ಟ್ವೀಟಿಸಿದ್ದಾರೆ.

LEAVE A REPLY

Please enter your comment!
Please enter your name here