ನೋಡಿದ್ರಾ ಮೋದಿ ಸಾರ್.. ವೈರಲ್ ಆಗ್ತಿದೆ ಆರ್‌ಜಿವಿ ಪೋಸ್ಟ್

ಏನ್ ಮಾಡಿದ್ರೂ, ಏನ್ ಹೇಳಿದ್ರೂ ಸೌಂಡ್ ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಇನ್ಸ್‌ಟಾಗ್ರಾಮ್ ಅಕೌಂಟ್‌ನಲ್ಲಿ ಶೇರ್ ಮಾಡಿದ ಫೋಟೋ ಭಾರೀ ಸಂಚಲನ ಸೃಷ್ಟಿಸಿದೆ. ದೇಶದ ಪ್ರತಿಷ್ಠಿತ ಮ್ಯಾಗಜೀನ್ ಆಗಿರುವ ಇಂಡಿಯಾ ಟುಡೇ ಮುಖಪುಟವನ್ನು ಪೋಸ್ಟ್ ಮಾಡಿರುವ ರಾಮ್‌ಗೋಪಾಲ್ ವರ್ಮಾ, ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಸೀರಿಯಸ್ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮತ್ತಷ್ಟು ಕಾಮೆಂಟ್ಸ್ ಜೊತೆ ಆಗುತ್ತಿವೆ.


ಸದ್ಯ ದೇಶದಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಯಾವ ರಾಜ್ಯದಲ್ಲಿಯೂ ಪರಿಸ್ಥಿತಿ ಆಶಾಜನಕವಾಗಿಲ್ಲ. ಸಾವಿರ ಸಂಖ್ಯೆಯಲ್ಲಿ ರೋಗಿಗಳು ಸಾವಿನ ಮನೆ ಸೇರುತ್ತಿದ್ದಾರೆ. ಆದರೆ, ಮೊದಲ ಅಲೆ ಬಂದಾಗ ತೆಗೆದುಕೊಂಡಿದ್ದ ಮುಂಜಾಗ್ರತಾ ಕ್ರಮಗಳ ಪೈಕಿ, ಎರಡನೇ ಅಲೆಯ ವೇಳೆ ಶೇಕಡಾ 10ರಷ್ಟನ್ನು ಕೂಡ ಮೋದಿ ಸರ್ಕಾರ ತೆಗೆದುಕೊಳ್ಳಲಿಲ್ಲ. ಹೀಗಾಗಿ ಯಾವ ರಾಜ್ಯವೂ ನೆಮ್ಮದಿಯಿಂದ ಇಲ್ಲ ಎಂದು ಇಂಡಿಯಾ ಟುಡೇ ಕಟುವಾಗಿ ವಿಮರ್ಶಿಸಿದೆ.. ಮೋದಿಯ ಗಿಮಕ್, ವಿಫಲ ವಿಧಾನಗಳೇ ಇದಕ್ಕೆಲ್ಲಾ ಕಾರಣ ಎಂದು ಚಾಟಿ ಬೀಸಿದೆ.

ದೇಶದಲ್ಲಿ ಕೊರೋನಾ ಸೆಕೆಂಡ್ ವೇವ್ ಕಾರಣದಿಂದ ಸಂಭವಿಸುತ್ತಿರುವ ಮರಣಗಳಿಂದ ಸ್ಮಶಾನಗಳು ತುಂಬಿ ಹೋಗಿವೆ. ಉತ್ತರ ಪ್ರದೇಶ, ದೆಹಲಿ ಸೇರಿ ಹಲವೆಡೆ ಸ್ಮಶಾನಗಳಲ್ಲಿ ಫುಲ್ ಎಂಬ ಬೋರ್ಡ್ ಇಟ್ಟಿದ್ದ ವಿಷಯ ಎಲ್ಲರಿಗೂ ತಿಳಿದಿರುವಂಥಾದ್ದೇ.. ಈ ಹಂತದಲ್ಲಿ ದೆಹಲಿಯ ಸ್ಮಶಾನವೊಂದರಲ್ಲಿ ಅಂತ್ಯಕ್ರಿಯೆಗಾಗಿ ಶವಗಳನ್ನು ಸರತಿ ಸಾಲಿನಲ್ಲಿ ಇಟ್ಟಿದ್ದ ಫೋಟೋವನ್ನು ಇಂಡಿಯಾ ಟುಡೇ ಮುಖಪುಟದಲ್ಲಿ ಪ್ರಕಟಿಸಿದ್ದು, ದೇಶದ ಸ್ಥಿತಿಯನ್ನು ಅನಾವರಣ ಮಾಡಿದೆ.

ಅಷ್ಟೇ ಅಲ್ಲ,

ಕೋವಿಡ್ 2.0
ವಿಫಲ ದೇಶ
ಯಾರನ್ನು ಹಳಿಯಬೇಕು?
ಏನು ಮಾಡಬೇಕು..?

ಎಂಬ ಟೈಟಲ್ ನ್ನು ಇಂಡಿಯಾ ಟುಡೇ ಇಟ್ಟಿದೆ. ಇಂಡಿಯಾ ಟುಡೇ ಮ್ಯಾಗಜೀನ್‌ನ ಈ ಮುಖಪುಟವನ್ನು ಶೇರ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ನೀವು ನೋಡಿದಿರಾ ಸಾರ್ ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿ, ಫೋಟೋ ಟ್ಯಾಗ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here