ಸಿದ್ದಗಂಗಾ ಮಠಕ್ಕೆ ಅಕ್ಕಿ-ಗೋಧಿ ಪೊರೈಕೆ ನಿಲ್ಲಿಸಿದ ಪ್ರಧಾನಿ ಮೋದಿ ಸರ್ಕಾರ

ತ್ರಿವಿಧ ದಾಸೋಹದ ಸಾಕ್ಷಿ ಆಗಿರುವ ಪ್ರಸಿದ್ಧ ಸಿದ್ಧಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಕ್ಕಿ ಮತ್ತು ಗೋಧಿ ಪೂರೈಕೆಯನ್ನೆ ನಿಲ್ಲಿಸಿಬಿಟ್ಟಿದೆ.

ಡಿಸೆಂಬರ್‌ನಲ್ಲಷ್ಟೇ ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು.

ಅನ್ನಪೂರ್ಣ ಯೋಜನೆಯಡಿ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ೭೩೫ ಕ್ವಿಂಟಾಲ್‌ ಅಕ್ಕಿ ಮತ್ತು ೩೫೦ ಕ್ವಿಂಟಾಲ್‌ ಗೋಧಿಯನ್ನು ನೀಡುತ್ತಿತ್ತು.

ಮೂರು ತಿಂಗಳಿಂದ ಅಕ್ಕಿ-ಗೋಧಿ ಸರಬರಾಜು ಸ್ಥಗಿತ ಆಗಿರುವುದನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ.

ದಾಸೋಹ ಕಾರ್ಯಕ್ರಮದಡಿ ಸರ್ಕಾರೇತರರ ಬಡ ಸಂಸ್ಥೆಗಳಿಗೆ ೭ ಕೆಜಿ ಅಕ್ಕಿ ನೀಡಲಾಗುತ್ತಿತ್ತು. ರಾಜ್ಯದ ೬ ರಿಂದ ೭ ಸಾವಿರ ಮಂದಿ ಪ್ರಯೋಜನ ಪಡೆಯುತ್ತಿದ್ದರು. ಇದರ ಬದಲಿಗೆ ಯಡಿಯೂರಪ್ಪ ಸರ್ಕಾರ ೭ ಕೆಜಿ ಅಕ್ಕಿಯನ್ನು ೫ ಕೆಜಿಗೆ ಇಳಿಸಿದೆ.

ಸಿದ್ದಗಂಗಾ ಮಠ ಮಾತ್ರವಲ್ಲದೇ ಅನಾಥಾಶ್ರಮ, ವೃದ್ಧಾಶ್ರಮ ಮತ್ತು ಪುರ್ನವಸತಿ ಕೇಂದ್ರಗಳು ಸೇರಿದಂತೆ ೪೫೪ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅಕ್ಕಿ ಮತ್ತು ಗೋಧಿಯನ್ನು ನಿಲ್ಲಿಸಲಾಗಿದೆ.

LEAVE A REPLY

Please enter your comment!
Please enter your name here